ಧಾರವಾಡ: ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷಕ್ಕೆ ಜನ ಬೆಂಬಲ ಹೆಚ್ಚುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಕೆಜೆಪಿ ಅಲೆ ಕಂಡು ಬರುತ್ತಿದೆ ಎಂದು ನಾಗನಗೌಡ ನೀರಲಗಿ ಪಾಟೀಲ ಹೇಳಿದರು. ಇಲ್ಲಿನ ಕೆಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಯಡಿಯೂರಪ್ಪನವರ ಜನಪರ ಕಾರ್ಯಕ್ರಮಗಳು ವಿವಿಧ ಪಕ್ಷಗಳ ಮುಖಂಡರು ಪಕ್ಷ ಸೇರ್ಪಡೆಯಾಗಲು ಪ್ರೇರಣೆ. ಜಿಪಂ ಮಾಜಿ ಸದಸ್ಯ ಜೆಡಿಎಸ್ನ ನಿಜನಗೌಡ ಪಾಟೀಲ ಮತ್ತು ಕಾಂಗ್ರೆಸ್ನ ತವನಪ್ಪ ಅಷ್ಟಗಿ ಪಕ್ಷ ಸೇರ್ಪಡೆಯಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಪಕ್ಷದ ಶಕ್ತಿ ಹೆಚ್ಚಾಗಿದೆ ಎಂದರು. ಮುಖಂಡ ಶಿವಾನಂದ ಹೊಳೆಹಡಗಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಯಡಿಯೂರಪ್ಪ ಅವರೇ ಕಾರಣ. ಆದರೆ, ಅದೇ ಪಕ್ಷದ ಜನರ ಮೋಸದಿಂದ ಪಕ್ಷ ಬಿಡಬೇಕಾಯಿತು ಎಂದರು. ವಿವಿಧ ಪಕ್ಷಗಳ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು. ಮಂಜುನಾಥ ಮುಗ್ಗಣ್ಣವರ, ಮಲ್ಲು ಹಳೇಮನಿ, ಮಲ್ಲಪ್ಪ ಮೇಟಿ, ನಾಗೇಶ ದೊಡವಾಡ ಇದ್ದರು. ಪ್ರವೀಣ ಮೂಲಿಮನಿ ನಿರೂಪಿಸಿದರು.