ಧಾರವಾಡ: ಭಿನ್ನಮತದ ನಡುವೆಯೇ ಆರಂಭಗೊಂಡು ಮುಕ್ತಾಯಗೊಂಡ ಧಾರವಾಡ ಸಾಹಿತ್ಯ ಸಂಭ್ರಮ ಮತ್ತು ಅದರ ಸುತ್ತಮುತ್ತ ಕುರಿತಂತೆ ಇಲ್ಲಿನ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ಸಂಘಟನೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಕುರಿತು ಭಾನುವಾರ ಸಂಘಟನೆಯ ಪದಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದು, ರಾಜ್ಯದ ಎಲ್ಲ ಸಾಹಿತ್ಯಾಸಕ್ತರನ್ನು ಒಟ್ಟಿಗೆ ಸೇರಿಸುವ ಅಗತ್ಯವಿದ್ದಾಗ ಇಂತಹ ದುರದೃಷ್ಟಕರ ಒಡಕಿಗೆ ಸಂಭ್ರಮದ ಸಂಘಟನಾಕಾರರು ಹೇಗೆ ಕಾರಣರಾದರು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ ಎಂದು ಸೂರ್ಯಕಾಂತ್ ಬಳ್ಳಾರಿ, ಚೇತನ್, ಎಚ್.ಜಿ. ದೇಸಾಯಿ ಆಗ್ರಹಿಸಿದ್ದಾರೆ.