ಬಳ್ಳಾರಿ: ಆಯುಷ್ ನಿರ್ದೇಶನಾಲಯ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಜಂಟಿಯಾಗಿ ಸಂಡೂರು ತಾಲೂಕು ಹೊಸದರೋಜಿ ಗ್ರಾಮದಲ್ಲಿ ಫೆ. 1ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ವೀರನಗೌಡ ಪಾಟೀಲ್ ತಿಳಿಸಿದ್ದಾರೆ.
ಸಂಡೂರು ಶಾಸಕ ಈ. ತುಕಾರಾಂ ಉದ್ಘಾಟಿಸಲಿದ್ದು, ದರೋಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ, ಉಪಾಧ್ಯಕ್ಷೆ ಮಮತಾ ಸುರೇಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಮ್ಮ, ಸಂಡೂರು ತಾ.ಪಂ.ಅಧ್ಯಕ್ಷೆ ಜೆ. ಭರಮಕ್ಕ, ತೋರಣಗಲ್ಲು ಕ್ಷೇತ್ರದ ಜಿಪಂ ಸದಸ್ಯ ಶರಣಪ್ಪ ಕೊಟಗಿನಹಾಳ, ಹೊಸದರೋಜಿ ತಾಪಂ ಸದಸ್ಯೆ ನೀಲಮ್ಮ, ದರೋಜಿ ಗ್ರಾಪಂ ಉಪಾಧ್ಯಕ್ಷೆ ಎನ್. ಗೌರಮ್ಮ, ಆಯುಷ್ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ. ಸಿದ್ರಾಮಯ್ಯ ಕುರ್ತಕೋಟಿ ಭಾಗವಹಿಸಲಿದ್ದಾರೆ ಎಂದು ಡಾ. ಪಾಟೀಲ್ ತಿಳಿಸಿದ್ದಾರೆ.