ಹುಬ್ಬಳ್ಳಿ: ಗಾನ ವಿದುಷಿ ಡಾ. ಗಂಗೂಬಾಯಿ ಹಾನಗಲ್ ಅವರು ಜನ್ಮಶತಮಾನೋತ್ಸವ ನಿಮಿತ್ತ ಮಾ. 3ರಂದು 11ಕ್ಕೆ ಸವಾಯಿ ಗಂಧರ್ವ ಹಾಲ್ನಲ್ಲಿ ಚಿತ್ರ ಸಂತೆ, ಅಂಚೆ ಚೀಟಿ ಮತ್ತು ನಾಣ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಂಸದ ಪ್ರಹ್ಲಾದ್ ಜೋಷಿ ಮತ್ತು ಜೆ.ಎಲ್. ಶಾನಭಾಗ ಚಿತ್ರ ಸಂತೆ ಮತ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಸೌರ ವಿಜ್ಞಾನಿ ಡಾ. ಡಿ.ಟಿ. ಬಾರ್ಕಿ, ಹಿರಿಯ ಕಲಾವಿದರಾದ ಶಶಿ ಸಾಲಿ, ಆರ್.ಬಿ. ಗರಗ, ವಿ.ಡಿ. ಬಡಿಗೇರ, ಕೆ.ವಿ. ಶಂಕರ್ ಆಗಮಿಸಲಿದ್ದಾರೆ. ಮನೋಜ್ ಹಾನಗಲ್ ಅಧ್ಯಕ್ಷತೆ ವಹಿಸುವರು. ಇದೇ ಕಾರ್ಯಕ್ರಮದ ನಿಮಿತ್ತ ಮಾ. 5ರಂದು ಸಂಜೆ 6ಕ್ಕೆ ಸವಾಯಿ ಗಂಧರ್ವ ಹಾಲ್ನಲ್ಲಿ ಪಂಡಿತ್ ವಸಂತ ಕನಕಾಪುರ ಅವರಿಗೆ ದಿ. ಕೃಷ್ಣಾ ಹಾನಗಲ್ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸನ್ಮಾನ ಸಮಾರಂಭದ ಮಖ್ಯ ಅತಿಥಿಗಳಾಗಿ ಭಾರತೀಯ ಸ್ಟೇಟ್ ಬ್ಯಾಂಕ್ನ ಉಪ ಮಹಾಪ್ರಬಂಧಕ ಆರ್. ಶಂಕರನಾರಾಯಣ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.