ಧಾರವಾಡ: ಹಿಂದುಳಿದ ವರ್ಗಗಳ ಜನಾಂಗದ ಸಂಘ-ಸಂಸ್ಥೆಗಳು ನಡೆಸುವ ಅನುದಾನ ರಹಿತ ಖಾಸಗಿ ವಿದ್ಯಾರ್ಥಿನಿಲಯಗಳ ನಿರ್ವಹಣಾ ವೆಚ್ಚಕ್ಕೆ ಸಹಾಯಧನ ಅಂದರೆ, ಪಾತ್ರೆ, ತಟ್ಟೆ, ಲೋಟ ಖರೀದಿ, ನೀರಿನ ಶುದ್ಧೀಕರಣ ಘಟಕ, ಗ್ರಂಥಾಲಯ, ಊಟದ ಟೇಬಲ್, ಅಡುಗೆ ಅನಿಲ, ಒಲೆ ಖರೀದಿ, ಕಂಪ್ಯೂಟರ್, ಯುಪಿಎಸ್ ಖರೀದಿ ಇತ್ಯಾದಿಗಳನ್ನು ಒಂದು ಬಾರಿ ಮಾತ್ರ # 2ರಿಂದ 5 ಲಕ್ಷಗಳ ವರೆಗೆ ಬೇಡಿಕೆ ಇರುವ ಹಿಂದುಳಿದ ವರ್ಗಗಳ ಸಂಘ- ಸಂಸ್ಥೆಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅಂತಹ ಸಂಘ-ಸಂಸ್ಥೆಗಳವರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಿ, ದಾಖಲೆಗಳೊಂದಿಗೆ ಮೂರು ಪ್ರತಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾನೂನು ಅರಿವು-ನೆರವು
ಧಾರವಾಡ: ಕೆ.ಎಲ್.ಇ. ಸಂಸ್ಥೆಯ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ವಕೀಲರ ಸಂಘ ಸೇರಿದಂತೆ ಹಲವು ಇಲಾಖೆಗಳು ಜಂಟಿಯಾಗಿ ಕಾನೂನು ಸಾಕ್ಷರತಾ ರಥ ಯಾತ್ರೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಹಮ್ಮಿಕೊಂಡಿದ್ದವು. ಹಿರಿಯ ಸಿವಿಲ್ ನ್ಯಾಯಾಧೀಶ ಎ.ವಿ ಶ್ರೀನಾಥ ಮಾತನಾಡಿ, ಸುರಕ್ಷಿತ ಮತ್ತು ಶಾಂತಿಯುತವಾದ ಜೀವನಕ್ಕೆ ಕಾನೂನು ಅತ್ಯವಶ್ಯಕ ಎಂದರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮುನಿರಾಜ, ನ್ಯಾಯವಾದಿ ಪ್ರಫುಲ್ಲಾ ನಾಯಕ, ಪ್ರಾಚಾರ್ಯ ಡಾ. ರಾಜೇಶ ನಾವಲಗಿಮಠ, ನ್ಯಾಯವಾದಿ ರಾಜೇಶ ಕೆ. ನಾವಲಗಿಮಠ, ಎಸ್.ಎನ್. ಹೆಗಡೆ ಇದ್ದರು. ಡಾ. ನೀಲಕ್ಕ ಪಾಟೀಲ ಸ್ವಾಗತಿಸಿದರು. ಶ್ರೀಧರ ಹಿರೇಮಠ ಪ್ರಾರ್ಥಿಸಿದರು. ಪ್ರೊ. ಆನಂದ ಜಕ್ಕಣ್ಣವರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸುಧೀರ ಕೋಟಿವಾಲೆ ವಂದಿಸಿದರು.
ತರಬೇತಿಗೆ ಅರ್ಜಿ ಆಹ್ವಾನ
ಧಾರವಾಡ: ಬೆಂಗಳೂರಿನ ಶ್ರೀ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸ್ ಮತ್ತು ಟೆಕ್ನಾಲಜಿ ಟ್ರಸ್ಟ್ ವತಿಯಿಂದ ಎರಡು ತಿಂಗಳ ಅವಧಿಯ ಅಗ್ರಿ ಕ್ಲಿನಿಕ್ ಆಂಡ್ ಅಗ್ರಿ ಬಿಸಿನೆಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಅರಣ್ಯ ವಿಜ್ಞಾನ, ಮೀನುಗಾರಿಕೆ, ಪಶು ಸಂಗೋಪನೆ ಪದವೀಧರರು ಹಾಗೂ ಕೃಷಿಯಲ್ಲಿ ಡಿಪ್ಲೊಮಾ ಪಡೆದ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಉಚಿತವಾಗಿದ್ದು, ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೃಷಿ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರದ ಸಂಯೋಜಕ ಡಾ. ಉದಯಕುಮಾರ ಕೆ.ಎಂ. ಅವರನ್ನು (7406999008) ಸಂಪರ್ಕಿಸಬಹುದು ಎಂದು ಪ್ರಟಕಣೆ ತಿಳಿಸಿದೆ.
ನಾಳೆ ಪರೀಕ್ಷಾ ತರಬೇತಿ ಕಾರ್ಯಾಗಾರ
ಧಾರವಾಡ: ಕರ್ನಾಟಕ ಕ್ಲಾಸಿಕ್ ಎಜ್ಯುಕೇಶನ್ ವತಿಯಿಂದ ಆ. 3ರಂದು ಬ್ಯಾಂಕ್ ಪಿಒ ಮತ್ತು ಮ್ಯಾನೇಜ್‌ಮೆಂಟ್ ಟ್ರೇನಿ ಕುರಿತು ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕ್ಲಾಸಿಕ್ ಸಂಸ್ಥೆಯ ನಿರ್ದೇಶಕ ಲಕ್ಷ್ಮಣ ಉಪ್ಪಾರ ತಿಳಿಸಿದ್ದಾರೆ. ಮಾಹಿತಿಗೆ 9980552080 ಸಂಪರ್ಕಿಸಬಹುದು.
4ರಂದು ವಿದ್ಯಾರ್ಥಿನಿಯರ ಸಂಘದ ಸಭೆ
ಧಾರವಾಡ: ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಹತ್ತಿರವಿರುವ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಮಹಿಳಾ ಕಾಲೇಜಿನ ಹಳೆಯ ವಿದ್ಯಾರ್ಥಿನಿಯರ ಸಂಘದ ಸಭೆ ಆ. 4ರಂದು ಬೆಳಗ್ಗೆ 10ಕ್ಕೆ ಕಾಲೇಜಿನ ಸಭಾಭವನದಲ್ಲಿ ನಡೆಯಲಿದೆ. ಇಲ್ಲಿಯವರೆಗೆ ವ್ಯಾಸಂಗ ಮಾಡಿರುವ ಹಿಂದಿನ ಎಲ್ಲ ಹಳೆಯ ವಿದ್ಯಾರ್ಥಿನಿಯರು ಸಭೆಗೆ ಹಾಜರಾಗಿ ಕಾಲೇಜಿನ ವಿಕಾಸಕ್ಕೆ ಪೂರಕವಾದ ಅಗತ್ಯ ಚಿಂತನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ಹಿರೇಮಠ ಹಾಗೂ ಹಳೆಯ ವಿದ್ಯಾರ್ಥಿನಿಯರ ಸಂಘದ ಸಂಯೋಜಕಿ ಡಾ. ನಿರ್ಮಲಾ ಹಿರೇಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟಗಿಹಳ್ಳಿಮಠ ನಿಧನ: ಸಂತಾಪ ಸಭೆ
ಕಲಘಟಗಿ: ತಾಲೂಕಿನ ಮಿಶ್ರಿಕೋಟಿ ಗ್ರಾಮದ ಸಹಕಾರಿ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ರೇವಣಸಿದ್ಧಯ್ಯ ಗದಿಗಯ್ಯ ಕಟಗಿಹಳ್ಳಿಮಠ ನಿಧನರಾಗಿದ್ದು, ಸಂಸ್ಥೆಯ ಅಧ್ಯಕ್ಷ ಸಿ.ಎಂ. ನಿಂಬಣ್ಣವರ ಅಧ್ಯಕ್ಷತೆಯಲ್ಲಿ ಸಂತಾಪ ಸೂಚಕ ಸಭೆಯು ಜರುಗಿತು. ನಿಂಬಣ್ಣವರ ಮಾತನಾಡಿ, ಕಟಗಿಹಳ್ಳಿಮಠ ಅವರು ಗ್ರಾಮದ ಸಹಕಾರಿ ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಹಾಗೂ ಅಭಿವೃದ್ಧಿಗೆ 45 ವರ್ಷಗಳಿಂದ ಸಾಕಷ್ಟು ಶ್ರಮ ವಹಿಸಿದ್ದಾರೆ. ಅಪ್ಪಟ ಶಿಕ್ಷಣ ಪ್ರೇಮಿಗಳಾಗಿದ್ದ ಅವರ ನಿಧನದಿಂದ ಸಂಸ್ಥೆಗೆ ಅಪಾರ ಹಾನಿಯಾಗಿದೆ ಹೇಳಿದರು. ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಿ.ಎಚ್. ಪಾಟೀಲ, ಟಿ.ಎಸ್. ಮನಸಾಲಿ, ಪ್ರಾಚಾರ್ಯ ಜೆ.ಎಸ್. ಹಿರೇಮಠ, ಸಿಬ್ಬಂದಿ ಆರ್.ವೈ. ಹೆಬ್ಬಾಳ, ಐ.ಎಸ್. ಕಲಘಟಗಿ, ಎಸ್.ಎಂ. ಮರಲಿಂಗಣ್ಣವರ, ಪಿ.ಟಿ. ಲಮಾಣಿ, ಸಿ.ಬಿ. ಗುಡಿಮನಿ, ಎಸ್.ಎಸ್. ಸುರೇಗಾಂವಕರ, ಎಸ್.ಎಚ್. ದಾನಣ್ಣವರ, ಜೆ.ವಿ. ಕುನ್ನೂರ, ಪಿ.ಎಲ್. ನರೇಂದ್ರ, ಎನ್.ಎಂ. ಯಾದವ, ಎಂ.ಕೆ. ಅರ್ಕಸಾಲಿ, ಎಂ.ಬಿ. ಹುಲಮನಿ ಇದ್ದರು.
Advertisement