ಧಾರವಾಡ: ಇಲ್ಲಿನ ಭಾವಸಾರ ವಿಜನ್ ಇಂಡಿಯಾ ವತಿಯಿಂದ ಹೆಚ್ಚು ಅಂಕ ಗಳಿಸಿದ ಭಾವಸಾರ ಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಭಾವಸಾರ ವಿಜನ್ ಇಂಡಿಯಾ ಸಂಸ್ಥಾಪಕ ನಾರಾಯಣರಾವ್ ತಾತುಸ್ಕರ, ವಿನಯಚಂದ್ರ ಮಹಿಂದ್ರಕರ ಕಾರ್ಯಕ್ರಮ ಉದ್ಘಾಟಿ ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ಮಾಡಿದರು. ಸಂಸ್ಥೆ ಅಧ್ಯಕ್ಷ ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಯೋಜಕರಾದ ಮಹದೇವ ಇಜಂತ ಕರ, ರಾಮಚಂದ್ರ ಧೊಂಗಡೆ, ಮಹೇಶ ಲೋಕಂಡೆ ಅವರನ್ನು ಸನ್ಮಾನಿಸಲಾಯಿತು. ಎಂ.ಎಂ. ದಾಮೋದರ, ಕೆ.ಜಿ. ಟಿಕಾರೆ, ಪ್ರಕಾಶ ತಿರುಮಲೆ, ವೆಂಕಟೇಶ ಜಾಧವ, ಆರ್.ಎಂ. ನವಲೆ, ರಾಜು ಜಿಂಗಾಡೆ ಇದ್ದರು.
Advertisement