ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 2
ಸರ್ಕಾರಿ ಪ್ರವಾಸಿ ಗೃಹಗಳು ದುರ್ಬಳಕೆಯಾಗುತ್ತಿವೆ ಎನ್ನುವ ಆಕ್ಷೇಪವಿರುವಾಗಲೇ, ನರಗುಂದ ಶಾಸಕ ಬಿ.ಆರ್. ಯಾವಗಲ್ ಸಂಬಂಧಿಕರು ಹುಬ್ಬಳ್ಳಿಯ ಸಕೀರ್ಟ್ ಹೌಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ದಾಂದಲೆ ಮಾಡಿ ಇದನ್ನು ರುಜುವಾತು ಪಡಿಸಿದ್ದಾರೆ.
ಶಾಸಕ ಬಿ.ಆರ್. ಯಾವಗಲ್ ಸಂಬಂಧಿಕರು ಎಂದು ಹೇಳಿಕೊಂಡು ಶುಕ್ರವಾರ ತಡರಾತ್ರಿ ಹುಬ್ಬಳ್ಳಿ ಸಕೀರ್ಟ್‌ಗೆ ಬಂದ್ ಆರು ಜನ ರೂಂ ನೀಡಲಿಲ್ಲ ಎನ್ನುವ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ದಾಂದಲೆ ಮಾಡಿ ಅಧಿಕಾರದ ಮದ ಪ್ರದರ್ಶಿಸಿದ್ದಾರೆ.
ಶಾಸಕ ಬಿ.ಆರ್. ಯಾವಗಲ್ ಸಂಬಂಧಿಕರು ಎಂದು ಹೇಳಿಕೊಂಡು ಶುಕ್ರವಾರ ತಡರಾತ್ರಿ ಹುಬ್ಬಳ್ಳಿ ಸಕೀರ್ಟ್ ಹೌಸ್‌ಗೆ ಬಂದ ಆರು ಜನರು ರೂಂ ನೀಡುವಂತೆ ಕೇಳಿದ್ದಾರೆ. ಆದರೆ ಯಾವುದೇ ರೂಮ್ ಖಾಲಿ ಇರದ ಕಾರಣ ರೂಂ ನೀಡಲು ಸಾಧ್ಯವಿಲ್ಲ ಎಂದು ಡಿ ದರ್ಜೆ ನೌಕರ ಪ್ರಭಾಕರ ಚಾಬೂಕಸವಾರ ತಿಳಿಸಿದ್ದಾರೆ. ತಾವು ಶಾಸಕರ ಸಂಬಂಧಿಕರು ತಮಗೆ ರೂಂ ನೀಡದಿದ್ದರೆ ಗ್ರಹಚಾರ ನೆಟ್ಟಗಿರಲ್ಲ ಎಂದು ಸಂಬಂಧಿಕರು ಧಮಕಿ ಹಾಕಿದ್ದಾರೆ. ರೂಂ ಇಲ್ಲದಿರುವಾಗ ಎಲ್ಲಿಂದ ನೀಡಲು ಸಾಧ್ಯ ಎಂದು ಕೇಳಿದಾಗ ಪ್ರಭಾಕರ ಮತ್ತು ದಿನಗೂಲಿ ನೌಕರ ರಾಜು ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಹಲ್ಲೆಗೊಳಗಾದವರಿಗೆ ದಿಕ್ಕು ತೋಚದಂತಾಗಿದೆ. ಆದರೂ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಸುಮ್ಮನಾಗಿದ್ದಾರೆ. ಈ ವಿಷಯವನ್ನು ರಾಜ್ಯ ಸರ್ಕಾರಿ ಡಿ ಗ್ರೂಪ್ ನೌಕರರ ಸಂಘ ಗಂಭೀರವಾಗಿ ಪರಿಗಣಿಸಿದೆ ಅಲ್ಲದೇ ಹಲ್ಲೆಗೊಳಗಾದ ಸಿಬ್ಬಂದಿ ಪರ ನಿಂತಿದೆ. ಜತೆಗೆ ತಪ್ಪಿತಸ್ಥರ ಬಂಧನಕ್ಕಾಗಿ ಒತ್ತಾಯಿಸಿ ಮಹಾನಗರ ಪೊಲೀಸ್ ಆಯುಕ್ತರು ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದೆ.
ಪ್ರವಾಸಿ ಗೃಹ ಶಾಸಕರಿಗೆ ನೀಡಬೇಕೆಂಬುದೇನೋ ಸರಿ. ಆದರೆ, ಶಾಸಕರ ಸಂಬಂಧಿಕರು ಇಲ್ಲಿ ಅಕ್ರಮ ಪ್ರವೇಶ ಪಡೆಯಲು ಹೋಗಿದ್ದೇ ಮೊದಲ ತಪ್ಪು. ಹೀಗಿರುವಾಗ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಶಾಸಕರ ಸಂಬಂಧಿಕರು ದುಂಡಾವರ್ತನೆ ತೋರಿದ್ದು ಅಪರಾಧ. ಈ ಘಟನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಈವರೆಗೂ ಯಾರನ್ನೂ ಬಂಧಿಸಿಲ್ಲ.
Advertisement