ಇಂದು ಡಾ. ಎಚ್.ಆರ್. ಅರಕೇರಿ ಸ್ಮರಣೆ ಕಾರ್ಯಕ್ರಮ

Updated on

ಧಾರವಾಡ: ಡಾ. ಎಚ್.ಆರ್. ಅರಕೇರಿ ಪ್ರತಿಷ್ಠಾನದ ವತಿಯಿಂದ ಡಾ. ಎಚ್.ಆರ್. ಅರಕೇರಿ ಅವರ 10ನೇ ಸ್ಮರಣೆಯನ್ನು ಆ. 5ರ ಬೆಳಗ್ಗೆ 11ಕ್ಕೆ ಸಂಸ್ಥೆ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಬಿ.ವಿ. ಪಾಟೀಲ ಉಪನ್ಯಾಸ ನೀಡುತ್ತಾರೆ. ಅತಿಥಿಗಳಾಗಿ ಕೃಷಿ ನಿರ್ದೇಶಕರಾದ ಶಬಾನಾ ಶೇಖ್ ಭಾಗವಹಿಸುತ್ತಾರೆ. ಡಾ. ಯು.ಜಿ. ನಲವಡಿ ಅಧ್ಯಕ್ಷತೆ ವಹಿಸುತ್ತಾರೆಂದು ಪ್ರಕಟಣೆ ತಿಳಿಸಿದೆ.
ಧಾರವಾಡ: ಶಾಲ್ಮಲಾ ಶಾಖೆ ಇಂದು ಉದ್ಘಾಟನೆ
ಧಾರವಾಡ: ಭಾರತ ವಿಕಾಸ ಪರಿಷತ್ತು ದೇಶದಲ್ಲಿ 50ನೇ ಹಾಗೂ ರಾಜ್ಯದಲ್ಲಿ 25ನೇ ವರ್ಷಾಚರಣೆ ಸಂದರ್ಭದಲ್ಲಿ ಧಾರವಾಡದಲ್ಲಿ ನೂತನವಾಗಿ ಸಂಪೂರ್ಣ ಮಹಿಳಾ ಸದಸ್ಯರನ್ನು ಒಳಗೊಂಡ ಶಾಲ್ಮಲಾ ಶಾಖೆ ರಚಿಸಿದ್ದು, ಆ. 5ರಂದು ಸಂಜೆ 4.30ಕ್ಕೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಉದ್ಘಾಟನೆಯಾಗಲಿದೆ. ಇದು ದಕ್ಷಿಣ ಭಾರತದ ಪ್ರಥಮ ಮಹಿಳಾ ಘಟಕ. ಅಧ್ಯಕ್ಷರಾಗಿ ಇಂದಿರಾ ಮಳಗಿ, ಕಾರ್ಯದರ್ಶಿಗಳಾಗಿ ಭಾರತಿ ಹೂಗಾರ, ಕೋಶಾಧ್ಯಕ್ಷರಾಗಿ ಶಾಲಿನಿ ಶಿವಪೂಜಿ ಅಧಿಕಾರ ಸ್ವೀಕರಿಸಲಿದ್ದಾರೆ. ಸಮಾರಂಭದಲ್ಲಿ ಘಟಕದಿಂದ 'ಗರ್ಭಸಂಸ್ಕಾರ' ಕಾರ್ಯಕ್ರಮ ಏರ್ಪಡಿಸಿದ್ದು, ಗರ್ಭಿಣಿಯರು, ನವ ವಿವಾಹಿತೆಯರು ಭಾಗವಹಿಸಲಿದ್ದಾರೆ. ಅವರಿಗೆ ತಾಯಿ ಎದೆ ಹಾಲಿನ ಮಹತ್ವ ಹಾಗೂ ಗರ್ಭಿಣಿಯರು ನವ-ಮಾಸಗಳವರೆಗೆ ಪಾಲಿಸಬೇಕಾದ ಧಾರ್ಮಿಕ ಮತ್ತು ವೈಜ್ಞಾನಿಕ ಆಚರಣೆ ಮಾಹಿತಿ ಒದಗಿಸಲಾಗುತ್ತದೆ. ಬೆಳಗಾವಿಯ ಆಯುರ್ವೇದ ಕಾಲೇಜಿನ ಡಾ೤ ಗಿರಿಜಾ ಸಾಣಿಕೊಪ್ಪ, ಡಾ೤ ಸುನೀತಾ ಪುರೋಹಿತ ಹಾಗೂ ಡಾ೤ ವೆಂಕಟನರಸಿಂಹಾಚಾರ್ಯ ಜೋಶಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಾಂಸ್ಕೃತಿಕ ಚಟುವಟಿಕೆಗೆ ಇಂದು ಚಾಲನೆ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯವು ಆ. 5ರಂದು ಬೆಳಗ್ಗೆ 10ಕ್ಕೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಸಮಾರಂಭ ಹಮ್ಮಿಕೊಂಡಿದೆ. ಅತಿಥಿ ಕಲಾವಿದರಾಗಿ ಪಂ. ಅಶೋಕ ನಾಡಗೇರ ಆಗಮಿಸುವರು. ಇದೇ ಸಂದರ್ಭ ನಿವೃತ್ತ ಹಿರಿಯ ತಬಲಾ ಪ್ರಾಧ್ಯಾಪಕ ಡಾ. ರಾಚಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಗುವುದು. ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ ಅಧ್ಯಕ್ಷತೆ ವಹಿಸುವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com