ಧಾರವಾಡ: ಅಸಮರ್ಪಕ ವಿದ್ಯುತ್ ಸರಬರಾಜು ಮತ್ತು ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ಬಿಜೆಪಿ ರೈತ ಮೋರ್ಚಾ ಮುಖಂಡರು ಸೋಮವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹೆಸ್ಕಾಂ ಅಭಿಯಂತರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಹೊಸ ವಿದ್ಯುತ್ ಸಂಪರ್ಕಕ್ಕೆ ರೈತರೇ ವೆಚ್ಚ ಭರಿಸಬೇಕಾಗಿದೆ. ಪಂಚಾಯಿತಿಗಳಲ್ಲಿ ಹಗಲೂ ಎಂಟು ತಾಸು ಗುಣಮಟ್ಟದ ಮೂರು ಫೇಸ್ ವಿದ್ಯುತ್ ಕೊಡಬೇಕು. ಶಿಥಿಲಗೊಂಡ ಕಂಬ, ತಂತಿ, ಸುಟ್ಟ ಟ್ರಾನ್ಸ್ಫಾರ್ಮರ್ ದುರಸ್ತಿ ವೆಚ್ಚ ಕಂಪನಿ ಭರಿಸಿ ಬದಲಿಸಬೇಕು, ಕಂಪನಿ ವೆಚ್ಚದಲ್ಲಿ ಹೊಸ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಶೀಘ್ರ ವಿದ್ಯುತ್ ಪೂರೈಸಬೇಕು. ಒಂದು ಗ್ರಾಮಕ್ಕೆ ಒಬ್ಬರಂತೆ ಲೈನ್ಮನ್ ನೇಮಿಸಬೇಕು. ಸುಗ್ಗಿಯ ಸಮಯದಲ್ಲಿ ರೈತರಿಗೆ ವಿದ್ಯುತ್ ಸಂಪರ್ಕ ಸಕ್ರಮಕ್ಕೆ ಸಮಯ ಅವಕಾಶ ನೀಡಬೇಕು. ಹಳ್ಳಿಯ ಹೊಸ ಬಡಾವಣೆಗಳಲ್ಲಿ ಕಂಪನಿಯ ವೆಚ್ಚದಲ್ಲಿ ವಿದ್ಯುತ್ ಪೂರೈಸಬೇಕು ಎಂದು ತಿಳಿಸಿದ್ದಾರೆ.
ಹೆಸ್ಕಾಂ ಅಧಿಕಾರಿಗಳು, ಬೇಡಿಕೆಗಳನ್ನು ಪರಿಹರಿಸುತ್ತೇವೆಂದರು. ಮಾಜಿ ಶಾಸಕಿ ಸೀಮಾ ಮಸೂತಿ, ಶಾಸಕ ಅರವಿಂದ ಬೆಲ್ಲದ, ಉಪ ಮೇಯರ್ ಮಂಜುಳಾ ಅಕ್ಕೂರ, ರೈತ ಮೋರ್ಚಾ ಶಶಿಮೌಳಿ ಕುಲಕರ್ಣಿ, ಪ್ರೇಮಾ ಕುಮಾರ ದೇಸಾಯಿ, ಅಜ್ಜಪ್ಪ ಹೊರಕೇರಿ, ಯಲ್ಲಪ್ಪ ಅರವಾಳದ, ಅಮೃತ ದೇಸಾಯಿ, ಶಿವಾನಂದ ಹೊಳೆಹಡಗಲಿ, ಮಡಿವಾಳಪ್ಪ ಉಳವಣ್ಣವರ, ಪ್ರಕಾಶ ಗೋಡಬೋಲೆ, ಮೋಹನ ರಾಮದುರ್ಗ, ಬಸವಣ್ಣೆಪ್ಪ ಬಾಳಗಿ, ಶೇಖಪ್ಪ ನವಲೂರು, ಭೀಮಸಿ ಕಸಾಯಿ, ಮಲ್ಲನಗೌಡ ಪಾಟೀಲ, ಬಸವನಗೌಡ ಪಾಟೀಲ, ನೇತಾಜಿ ಬುದ್ದಿವಂತಗೌಡರ, ದಶರಥ ದೇಸಾಯಿ, ಮೈಲಾರ ಉಪ್ಪಿನ, ಮಂಜುನಾಥ ಮಲ್ಲಿಗವಾಡ, ಮಂಜುನಾಥ ನಡಟ್ಟಿ, ಪ್ರಮೋದ ಕಾರಕೂನ್, ಬಸವರಾಜ ರುದ್ರಾಪುರ ಮುಂತಾದವರು ಇದ್ದರು.
Advertisement