ಹುಬ್ಬಳ್ಳಿ: ಅಸಮರ್ಪಕ ವಿದ್ಯುತ್ ಸರಬರಾಜು, ಅನಿಯಮಿತ ಲೋಡ್ ಶೆಡ್ಡಿಂಗ್ ಖಂಡಿಸಿ ಹುಬ್ಬಳ್ಳಿ ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ಹುಬ್ಬಳ್ಳಿ ವಿದ್ಯುತ್ ವೃತ್ತ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಲಾಯಿತು.
ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ ಅಸಮರ್ಥರು ಎಂದು ದೂರಿದರು. ಬಳಿಕ ವೃತ್ತ ಕಚೇರಿ ಅಧಿಕಾರಿಗಳಿಗೆ ಮನವಿ ಅರ್ಪಿಸಿ, ರೈತರ ಪಂಪ್ಸೆಟ್ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು. ರೈತರ ಪಂಪ್ಸೆಟ್ಗಳಿಗೆ ಅಳವಡಿಸಲಾದ ಟ್ರಾನ್ಸ್ಫಾರ್ಮ್ರಗಳು ಸುಟ್ಟಾಗ ತಕ್ಷಣ ಬದಲಾಯಿಸಬೇಕು. ರೈತರ ಪಂಪ್ಸೆಟ್ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ರೈತರ ಪಂಪ್ಸೆಟ್ಗಳಿಗೆ ಈ ಹಿಂದೆ ಅಳಡಿಸಲಾದ ಹಳೆ ಕಂಬ ಹಾಗೂ ವಿದ್ಯುತ್ ತಂತಿಗಳನ್ನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಅಶೋಕ ಕಾಟವೆ, ಈರಣ್ಣ ಜಡಿ, ವಿಜಯ ನಾಡಜೋಶಿ, ರಂಗಾ ಬದ್ದಿ, ಚನ್ನ್ನಪ್ಪ ಬದಿ, ಚನ್ನಬಸಯ್ಯ ಅರಳಿಕಟ್ಟಿ, ಟಿ.ಜಿ. ಬಾಲಣ್ಣನವರ, ಶಿವಾನಂದಪ್ಪ ಹೂಸರ, ಈಶಣ್ಣ ಅಂಚಟಗೇರಿ, ಮಲ್ಲೇಶಪ್ಪ ಹಿರೂರ, ಶಾಂತಯ್ಯ ಕೂರಾನಮಠ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Advertisement