ಹುಬ್ಬಳ್ಳಿ: ವೃದ್ಧರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕು ಎಂದು ರೋಟರಿ ಕ್ಲಬ್ ಜಿಲ್ಲಾ ಚೇರ್‌ಮನ್ ಡಾ ಎಸ್.ಎಸ್. ಹಿರೇಮಠ ಹೇಳಿದರು.
ಇಲ್ಲಿಯ ಪ್ರೋಬಸ್ ಕ್ಲಬ್ ವಿದ್ಯಾನಗರದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನೂತನ ಅಧ್ಯಕ್ಷ ವಿ.ಬಿ. ಬೆಳವಡಿ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಸಂಘದ ಸಂಸ್ಥಾಪಕ ವೈ.ಬಿ. ಆಲೂರ, 1995ರಲ್ಲಿ 10 ಸದಸ್ಯರೊಂದಿಗೆ ಪ್ರಾರಂಭಗೊಂಡ ಸಂಸ್ಥೆ ಈಗ 100 ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು.
ನೂತನ ಪದಾಧಿಕಾರಿಗಳಾಗಿ ವಿ.ಬಿ. ಬೆಳವಡಿ (ಅಧ್ಯಕ್ಷ), ಸಂಧ್ಯಾ ರಾಯ್ಕರ (ಉಪಾಧ್ಯಕ್ಷೆ), ಆರ್.ಎನ್. ಫತ್ತೇಪುರ (ಕಾರ್ಯದರ್ಶಿ), ರಾಘವೇಂದ್ರಲು (ಸಹ ಕಾರ್ಯದರ್ಶಿ), ಎಸ್.ಸಿ. ಗಾಣಿಗೇರ (ಕೋಶಾಧ್ಯಕ್ಷ), ಡಾ ಎಚ್.ಜಿ. ಮಹಾದೇವ (ಸಹ ಕೋಶಾಧ್ಯಕ್ಷ), ಬಿ.ಸಿ. ಕೀರ್ತಿ, ಪೂಜಾರ ವಿ.ಎ., ಎಸ್.ಸಿ. ಹುಬ್ಬಳ್ಳಿ, ಶಾರದಾ ಗುಪ್ತಾ, ಕಮಲಾ ಸೀರಿ, ಶಾಂತಕ್ಕಾ ಪಲ್ಟನಕರ (ನಿರ್ದೇಶಕರು) ಅಧಿಕಾರ ಸ್ವೀಕರಿಸಿದರು. ಬಿ.ಎಲ್. ಲಿಂಗಶೆಟ್ಟರ, ಎಸ್.ವಿ. ಕೊಟಗಿ, ಎಂ.ಪಿ. ಶಿವಪೂಜಿ, ಜಗನ್ನಾಥ ಬದ್ದಿ, ಎಸ್.ಎಂ. ಗೀತಾ ಇತರರು ಹಾಜರಿದ್ದರು.
Advertisement