ಹುಬ್ಬಳ್ಳಿ: ಗೋಕುಲ ರಸ್ತೆಯ ನಿಖೇತನ ಕಾಲೋನಿಯ ಮನೆಯ ಕೀಲಿಕೈ ಮುರಿದು ಒಳ ನುಗ್ಗಿದ ಕಳ್ಳರು ರು. 17 ಸಾವಿರ ಮೌಲ್ಯದ ಉಂಗುರ ಹಾಗೂ ರು. 6 ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ನಾರಾಯಣ ಭಟ್ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ. ಕೀಲಿ ಹಾಕಿ ಮನೆಯಿಂದ ಹೊರ ಹೋದ ವೇಳೆ ಕಳ್ಳರು ಈ ಕೃತ್ಯವೆಸಗಿದ್ದಾರೆ. ಗೋಕುಲ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
100 ಹಂದಿಗಳ ಸಾಗಾಟ
ಹುಬ್ಬಳ್ಳಿ: ನಗರದ ವಿವಿಧೆಡೆ ಬುಧವಾರ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಯಿತು. ಉಣಕಲ್ಲ, ಗಿರಣಿಚಾಳ, ವಿಕಾಸ ನಗರ, ಮೊಮಿನ್ ಪ್ಲಾಟ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಬೆಳಗ್ಗೆಯಿಂದ 100 ಹಂದಿ ಹಿಡಿದು ಸಾಗಿಸಲಾಯಿತು. ಧಾರವಾಡದಲ್ಲಿ ಮಂಗಳವಾರ 200 ಹಂದಿ ಹಿಡಿದಿದ್ದ ತುಮಕೂರಿನ ಹಂದಿ ಹಿಡಿಯುವ ಪರಿಣಿತರು, ಬುಧವಾರ ಹಿಡಿದಿದ್ದ ಹಂದಿಗಳೊಂದಿಗೆ ತುಮಕೂರಿಗೆ ಪ್ರಯಾಣ ಬೆಳೆಸಿದರು. ಹಂದಿ ಹಿಡಿಯುವ ಕಾರ್ಯಾಚರಣೆಗೆ ಪೊಲೀಸ್ ಬಂದೋಬಸ್ತ ಒದಗಿಸಲಾಗಿತ್ತು. ಹಂದಿ ಹಿಡಿಯುವ ಪರಿಣಿತರು ಹಂದಿಗಳೊಂದಿಗೆ ಬುಧವಾರ ತುಮಕೂರಿಗೆ ತೆರಳಿದ್ದು, ಅವರು ಮರಳಿದ ಬಳಿಕ ಕಾರ್ಯಾಚರಣೆ ಆರಂಭಿಸುವುದಾಗಿ ಪಾಲಿಕೆ ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ ತಿಳಿಸಿದ್ದಾರೆ.
Advertisement