ಧಾರವಾಡ: ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಬೇಕೆಂದು ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೈದಿಯೋರ್ವ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶಿವಶಂಕರ ಹಿರೇಮಠ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಶಿಕ್ಷೆಯಿಂದ ಪಾರಾಗಲು ಶಿವಶಂಕರ ಕಳೆದ ಜ. 26 ಮತ್ತು ಆ. 15ರಂದು ಸನ್ನಡತೆ ಆಧಾರದ ಮೇಲೆ ತಮ್ಮನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದ. ಈ ಬಾರಿಯಾದರೂ ಬಿಡುಗಡೆ ಮಾಡಬಹುದೆಂದು ಮತ್ತೇ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದನು. ಸರ್ಕಾರ ಮತ್ತೆ ಅರ್ಜಿ ತಳ್ಳಿ ಹಾಕಿದ ಪರಿಣಾಮ ತನ್ನನ್ನು ಬಿಡುಗಡೆ ಮಾಡಲೇಬೇಕು ಎಂದು ಕಾರಾಗೃಹದಲ್ಲಿಯೇ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾನೆ ಎಂದು ತಿಳಿದು ಬಂದಿದೆ.