ಇಂದು ಸ್ವರ್ಣ ಪ್ರಾಶನ

Updated on: 

ಹುಬ್ಬಳ್ಳಿ: ನಗರದ ಸಿಬಿಟಿ ಬಳಿ ಇರುವ ಅನುಗ್ರಹ ಆಯುರ್ವೇದ ಆಸ್ಪತ್ರೆಯಲ್ಲಿ ಏಳು ವರ್ಷದೊಳಗಿನ ಮಕ್ಕಳಿಗೆ ಜು. 27ರಂದು ಸ್ವರ್ಣಪ್ರಾಶನ ಮಾಡಿಸಲಾಗುತ್ತಿದೆ. ವಿಕಲಚೇತನ ಮಕ್ಕಳಿಗೆ ಉಚಿತ ಸ್ವರ್ಣ ಪ್ರಾಶನ ಮಾಡಿಸಲಾಗುವುದು. ಮಾಹಿತಿಗೆ ಮೊ. 9739865460 ಸಂಪರ್ಕಿಸಲು ಕೋರಲಾಗಿದೆ.
ತಾಪಂ ಸಾಮಾನ್ಯ ಸಭೆ
ಹುಬ್ಬಳ್ಳಿ: ಹುಬ್ಬಳ್ಳಿ ತಾಪಂ ಸಾಮಾನ್ಯ ಸಭ್ನೆ ಮಿನಿವಿಧಾನಸೌಧದ 2ನೇ ಮಹಡಿಯ ಸಭಾಂಗಣದಲ್ಲಿ ಜು. 28ರ ಬೆಳಗ್ಗೆ 11ಕ್ಕೆ ನಡೆಯಲಿದೆ. ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ಶಾಂತ್ವವ ಸಂಕಣ್ಣವರ ವಹಿಸಲಿದ್ದಾರೆ. ಸಭೆಗೆ ತಾಪಂನ ಎಲ್ಲ ಸದಸ್ಯರು, ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಜರಿರುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ಜಿ. ಹಿರೇಮಠ ತಿಳಿಸಿದ್ದಾರೆ.



ಆರೋಪಿಗಳು ಬಿಂದಾಸ್...
ಪೊಲೀಸ್ ಠಾಣೆಯಲ್ಲಿ ಇಂಥ ಭಕ್ಷಕ ಪೊಲೀಸ್ ಸಿಬ್ಬಂದಿಯನ್ನು ಭೇಟಿಯಾದರಾಯಿತು 'ಬಾರಾ ಖೂನ್ ಮಾಪ್‌' ಆಗುತ್ತದೆ ಎನ್ನುವ ಕಾರಣಕ್ಕೆ ಆರೋಪಿಗಳು ನಿಶ್ಚಿಂತರಾಗಿದ್ದಾರೆ. ಅಪರಾಧಿ ಕೃತ್ಯವೆಸಗಿ ಡೀಲಿಂಗ್ ಪಿಸಿಗಳಿಗೆ ಹಣಕೊಟ್ಟು ತಾವೂ ಹಣ ಮಾಡಿಕೊಳ್ಳುತ್ತಿದ್ದಾರೆ. ಇಂಥವರ ಕೈಗೆ ಸಿಕ್ಕು ಅಮಾಯಕರು ನಲಗುತ್ತಿದ್ದಾರೆ.
ನ್ಯಾಯಾ ಎಲ್ಲಿದೆ?...
ನ್ಯಾಯ ಸಿಗುತ್ತದೆ ಎಂದು ಪೊಲೀಸ್ ಠಾಣೆಗೆ ಹೋದರೆ ಅಲ್ಲೇ ಅನ್ಯಾಯ ನಡೆಯುತ್ತಿರುವುದರಿಂದ ನ್ಯಾಯ ಎಲ್ಲಿದೆ? ಎಂದು ಜನರು ಕೇಳುವಂತಾಗಿದೆ. ಮಹಾನಗರ ಪೊಲೀಸ್ ಆಯುಕ್ತರು ಇಂಥ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಹೊಸದಾಗಿ ಬಂದ ಡಿಸಿಪಿ ಹನುಮಂತರಾಯ, ಕ್ರೈಂ ಡಿಸಿಪಿ ಘೋರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯ್ತಿ ಕಟ್ಟೆಗಳಾದ ಠಾಣೆಗಳಿಗೆ ಸಭ್ಯರೂ ಬರುವಂತಾಗಲು ಹೊಸ ರೂಪ ಕೊಡಬೇಕಿದೆ. ಇಲ್ಲದಿದ್ದಲ್ಲಿ ಪೊಲೀಸ್ ವ್ಯವಸ್ಥೆ ಎಂದ ಕೂಡಲೇ ಜನ ಅಸಹ್ಯ ಪಡುವ ಕಾಲ ದೂರವಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com