ಧಾರವಾಡ: ಕೆಎಲ್ಇ ಸಂಸ್ಥೆಯ ಮೃತ್ಯುಂಜಯ ಕಲಾ, ವಾಣಿಜ್ಯ ಕಾಲೇಜಿನ ರೆಡ್ಕ್ರಾಸ್, ಎನ್ನೆಸ್ಸೆಸ್ ಘಟಕ, ಸ್ಕೌಟ್ಸ್-ಗೈಡ್ಸ್ನಿಂದ ಶನಿವಾರ ವಿದ್ಯಾರ್ಥಿಗಳು ಮೌನ ಆಚರಿಸುವ ಮೂಲಕ 15ನೇ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿದರು. ಪ್ರಾಚಾರ್ಯ ಡಾ. ಕೆ.ಸಿ. ಪಾಂಗಿ ಮಾತನಾಡಿ, ಸೈನೆಕ್ಕೆ ಸೇರಿ ತಾಯ್ನಾಡಿನ ಋಣ ತೀರಿಸಬೇಕೆಂದರು. ಮಡಿದ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು. ಶರಣಬಸವ ವಾಲಿ ಮಾತನಾಡಿದರು.