ಕನ್ನಡಪ್ರಭ ವಾರ್ತೆ, ಧಾರವಾಡ, ಜು. 29
ಹು-ಧಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಆಗ್ರಹಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದರ್ಪಣ ಜೈನ್ ಜಿಲ್ಲಾಧಿಕಾರಿ ಆಗಿದ್ದಾಗ ಪಾಲಿಕೆ ಅಭಿಯಂತರು, ಸಣ್ಣ ನೀರಾವರಿ ಇಲಾಖೆ ಅಭಿಯಂತರಿಂದ ಪಾಲಿಕೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಯೋಜನೆಗಳಿಗೆ ಲಕ್ಷಾಂತರ ರು. ವೆಚ್ಚ ಮಾಡಿ ಎಲ್ಲ ಕೆರೆಗಳನ್ನು ಸುಸ್ಥಿಯಲ್ಲಿರುವಂತೆ ಮಾಡಲಾಗಿತ್ತು. ಯೋಜನೆಗೆ ಮಾಡಿದ ವೆಚ್ಚ ಪ್ರಯೋಜನ ಆಗಬೇಕಿದೆ ಎಂದು ತಿಳಿಸಿದ್ದಾರೆ.
ಕಳೆದ ಮಳೆಗಾಲದ ಮೊದಲು ಹಲವಾರು ಅಭಿವೃದ್ಧಿ ಕಾರ್ಯಗಳು ಪೂರ್ಣ ಕೈಗೊಳ್ಳಲಾಗದೆ ಉಳಿದಿರುವುದು ಕಂಡು ಬಂದಿದೆ. ಕೆರೆಗಳ ನಿರ್ವಹಣೆ ಕಾರ್ಯವನ್ನು ಕಾಲಕ್ಕೆ ಸರಿಯಾಗಿ ಮಾಡದ್ದರಿಂದ ಕೆರೆಗಳು ಸುಸ್ಥಿಯಲ್ಲಿ ಉಳಿದಿಲ್ಲ. ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.