ಸಾಮಾನ್ಯ ಸಭೆ ನಡೆಸಿ

Updated on: 

ಧಾರವಾಡ: ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಸರ್ವ ಸದಸ್ಯರ ಸಭೆ ಕರೆಯುವಂತೆ ಆಗ್ರಹಿಸಿ ಇಲ್ಲಿನ ಸವದತ್ತಿ ರಸ್ತೆಯ ಮರಾಠಾ ಮಂಡಳಿಯ ಕಚೇರಿ ಎದುರು ಸೋಮವಾರ ಸದಸ್ಯರು ಪ್ರತಿಭಟನೆ ನಡೆಸಿದರು.
ಆಡಳಿತ ಮಂಡಳಿ ಪದಾಧಿಕಾರಿಗಳು ಅವ್ಯವಹಾರ ನಡೆಸಿರುವುದು ಈ ಹಿಂದೆ ಜ. 19ರಂದು ಕರೆದಿದ್ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಹಿರಂಗವಾಗಿತ್ತು. ಈ ಕುರಿತು ವಿವರ ನೀಡುವಂತೆ ಸದಸ್ಯರು ಒತ್ತಾಯಿಸಿದರೂ ಆಡಳಿತ ಮಂಡಳಿ ಸರಿಯಾಗಿ ಮಾಹಿತಿ ನೀಡಲಿಲ್ಲ. ಆಡಳಿತ ಮಂಡಳಿ ಸದಸ್ಯರ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ.ಪಿ. ಮುರಾರಿ ಅಧ್ಯಕ್ಷತೆಯಲ್ಲಿ ಲೆಕ್ಕಪತ್ರ ಪರಿಶೋಧನಾ ಸಮಿತಿ ರಚಿಸಲಾಯಿತು.
ಇದೀಗ ಸಮಿತಿ ತನ್ನ ವರದಿ ಸಲ್ಲಿಸಿದ್ದರೂ ಆಡಳಿತ ಮಂಡಳಿ ವರದಿಯ ಅಂಶಗಳನ್ನು ಬಹಿರಂಗಪಡಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವ್ಯವಹಾರ ನಡೆಸಿದ ಆಡಳಿತ ಮಂಡಳಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಬೇಕು. ಜತೆಗೆ ಮಂಡಳಿಗೆ ದೇಣಿಗೆ ನೀಡಿದವರ ಹೆಸರನ್ನು ಪ್ರಕಟಿಸಬೇಕು. ಸದಸ್ಯರ ಒಪ್ಪಿಗೆ ಪಡೆಯಲು ಕೂಡಲೇ ಸರ್ವ ಸದಸ್ಯರ ಸಭೆ ಕರೆಯಬೇಕು. ಆಡಳಿತ ಮಂಡಳಿ ಸರ್ವ ಸದಸ್ಯರ ಸಭೆ ಕರೆಯದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.
ಆಡಳಿತ ಮಂಡಳಿ ಸದಸ್ಯರಾದ ಮಂಜುನಾಥ ಜಾಧವ, ದತ್ತಾ ಮೋಟೆ, ದುಷ್ಯಂತ ಪವಾರ, ಸುರೇಶ ಸವ್ವಾಸೆ, ಸದಸ್ಯರಾದ ನಾರಾಯಣ ಹುಬ್ಬಳ್ಳಿ, ನವೀನ ಕದಂ, ಬಸವರಾಜ ಜಾಧವ, ವಿಜಯ ಭೋಸ್ಲೆ ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com