ಅತ್ಯಾಚಾರ ಆರೋಪಿ ಬಂಧನ ಶೀಘ್ರ

Updated on: 

ಹುಬ್ಬಳ್ಳಿ: ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮೇಲೆ ಹುಬ್ಬಳ್ಳಿ ಹೊರವಲಯದ ರಾಯನಾಳ ಬಳಿ ಈಚೆಗೆ ಸಾಮೂಹಿಕ ಅತ್ಯಾಚಾರ ನಡೆಸಿ, ಪರಾರಿಯಾಗಿರುವ ಆರೋಪಿಯನ್ನು ಎರಡು ದಿನಗಳಲ್ಲಿ ಬಂಧಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಜಹೀರ್ ಖಾನ್, ಫಾರೂಖ್ ದೊಡ್ಡಮನಿ, ಗೌಸ್ ಮೊರಬ, ಮುನ್ನಾ ಬಾನಿ ಹಾಗೂ ಆಸಿಫ್ ಶೇಖ್ ಎಂಬ ಐವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಸೆರೆಗೆ ಜಾಲ ಬೀಸಿದ್ದಾರೆ. ಶುಕ್ರವಾರ ಅಥವಾ ಶನಿವಾರದೊಳಗೆ ಆತನನ್ನೂ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತರು ಹಳೇ ಹುಬ್ಬಳ್ಳಿಯವರಾಗಿದ್ದು, ಎಲ್ಲರೂ ಸ್ನೇಹಿತರು ಎಂದು ಹೇಳಲಾಗಿದೆ. ಇವರೆಲ್ಲರ ಮೊಬೈಲ್ ಸಂಪರ್ಕಗಳನ್ನು ಆಧರಿಸಿ, ತಪ್ಪಿಸಿಕೊಂಡಿರುವ ಆರೋಪಿಯ ಬಗ್ಗೆ ಸುಳಿವು ಸಂಗ್ರಹಿಸಲಾಗಿದೆ. ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.  ಹಳೇ ಹುಬ್ಬಳ್ಳಿ ಟಿಪ್ಪು ನಗರ ನಿವಾಸಿ 24 ವರ್ಷದ ಅವಿವಾಹಿತೆ ಹಾಗೂ ಬಾಣತಿಕಟ್ಟಾದ 26 ವಯಸ್ಸಿನ ವಿಚ್ಛೇದಿತೆ ಮೇಲೆ ಆರು ಜನರು ಸೋಮವಾರ ಮಧ್ಯರಾತ್ರಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಅಯೋಧ್ಯಾ ನಗರದ ನಿವಾಸಿ ಜಹೀರ್ ಖಾನ್ ಮಾಡಿದ್ದ ಮೊಬೈಲ್ ಕರೆ ನಂಬಿ ತೆರಳಿದ್ದ ಇಬ್ಬರೂ ಮಹಿಳೆಯರಿಗೆ ಬೆದರಿಕೆ ಹಾಕಿ, ಎರಡು ಬೈಕ್‌ಗಳಲ್ಲಿ ಅಪಹರಿಸಿದ್ದರು. ರಾಯನಾಳ ಬಳಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳು, ಮಹಿಳೆಯರನ್ನು ಅವರ ಮನೆ ಬಳಿ ಬಿಟ್ಟು ಪರಾರಿಯಾಗಿದ್ದರು.
ಅತ್ಯಾಚಾರಕ್ಕೊಳಗಾಗಿರುವ ಇಬ್ಬರೂ ಮಹಿಳೆಯರ ಆರೋಗ್ಯ ತಪಾಸಣೆಯನ್ನು ಕಿಮ್ಸ್‌ನಲ್ಲಿ ನಡೆಸಲಾಗಿದೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com