ಪದವೀಧರ ಚುನಾವಣೆಗೂ ನೋಟಾ ಸೌಲಭ್ಯ

Updated on: 

ಧಾರವಾಡ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಚುನಾವಣಾ ಆಯೋಗ ಬಳಸಿದ್ದ ತಿರಸ್ಕೃತ ಮತ (ನೋಟಾ) ಜೂ. 20ರಂದು ನಡೆಯಲಿರುವ ಪದವೀಧರರ ಚುನಾವಣೆಯಲ್ಲೂ ಬಳಸಲಾಗುತ್ತಿದೆ.
ಈ ಕುರಿತು ಚುನಾವಣಾ ಆಯೋಗ ಆದೇಶಿಸಿದ್ದು, ಪಶ್ಚಿಮ ಪದವೀಧರರ ಚುನಾವಣೆಯ ಮತದಾರರಿಗೂ ನೋಟಾ ಮತದಾನದ ಸೌಲಭ್ಯವಿದೆ. ಮತಪತ್ರದಲ್ಲಿ ನೋಟಾ ಅಂತಾ ನಮೂದಿಸಿದ ಕಾಲಂ ಎದುರಿಗೆ ಒದಗಿಸಿರುವ ಸ್ಥಳದಲ್ಲಿ ಕೇವಲ ್ಗ ಈ್ಠ್ಟಡಡ ಗುರುತನ್ನು ನಮೂದಿಸುವ ಮೂಲಕ ಮತ ಚಲಾಯಿಸಬಹುದು. ಅಭ್ಯರ್ಥಿಗಳ ಹೆಸರಿನ ಮುಂದೆ ಪ್ರಾಶಸ್ತ್ಯದ ಅಂಕಿ ನಮೂದಿಸಿದಂತೆ, ನೋಟಾ ಕಾಲಂ ಎದುರಿಗೆ ಅಂಕಿಗಳಲ್ಲಿ ಮತ ನಮೂದಿಸಿದ ಮತಪತ್ರಗಳು ಹಾಗೂ ನೋಟಾ ಮತದಾನದ ಸೌಲಭ್ಯ ಉಪಯೋಗಿಸಿದ ನಂತರ ಯಾವದೇ ಅಭ್ಯರ್ಥಿಗೆ ಮತ ಚಲಾಯಿಸಿದ ಮತಪತ್ರಗಳು ಅಸಿಂಧುವಾಗಿರುತ್ತವೆ ಎಂದು ಆಯೋಗ ಆದೇಶದಲ್ಲಿ ಸ್ಪಷ್ಟಪಡಿಸಿದೆ.
13 ದಾಖಲೆ...
ಜೊತೆಗೆ, ಪಶ್ಚಿಮ ಪದವೀಧರರ ಚುನಾವಣೆಗೆ ಸಂಬಂಧಿಸಿದ ಮತದಾರರು ತಮ್ಮ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಹೊಂದಿರದೇ ಇದ್ದಲ್ಲಿ, ಅದರ ಪರ್ಯಾಯವಾಗಿ 13 ದಾಖಲೆಗಳ ಪೈಕಿ ಯಾವದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಲು ಚುನಾವಣಾ ಆಯೋಗವು ಅವಕಾಶ ನೀಡಿದೆ. ಖೊಟ್ಟಿ ಮತದಾನ ತಡೆಗಟ್ಟುವ ಸಲುವಾಗಿ ಮತ ಚಲಾಯಿಸಲು ಬರುವ ಪ್ರತಿ ಪದವೀಧರ ಮತದಾರ ಹಾಗೂ ಅವರು ಹಾಜರಪಡಿಸುವ ಗುರುತಿನ ಚೀಟಿಯ ವಿಡಿಯೋಗ್ರಫಿ ಕಾರ್ಯ ಸಹ ಮಾಡಲಾಗುತ್ತಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com