ಸರ್ಕಾರದ ನಿರ್ಧಾರಕ್ಕೆ ವಿರೋಧ

Updated on: 

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 20
ರಾಜ್ಯದ ಅನುದಾನಿತ ಖಾಸಗಿ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅನುದಾನ ರಹಿತ ಅವಧಿಯ ಸೇವಾಜ್ಯೇಷ್ಠತೆ ಮತ್ತು ವೇತನ ಭತ್ಯೆಗೆ ಪರಿಗಣಿಸದಿರಲು ಸರಕಾರ ನಿರ್ಧರಿಸಿದ್ದು ಇದರಿಂದ ಸಾವಿರಾರು ಸಿಬ್ಬಂದಿ ವೇತನ ಕಡಿತ ಮತ್ತು ಹಿಂಬಡ್ತಿಗೆ ಸಿಲುಕಿಕೊಂಡಿದ್ದಾರೆಂದು ಡಾ.ಲಿಂಗರಾಜ ಅಂಗಡಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ರಾಜ್ಯ ಸರ್ಕಾರ 1995 ಜೂ. 1ರಂದು ರೂಪಿಸಿದ ಪ್ರಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ಸೇವಾವಧಿ ಪರಿಗಣಿಸಿ ಪದೋನ್ನ್ನತಿ ಹಾಗೂ ಸೇವಾ ಸೌಲಭ್ಯ ನೀಡಲಾಗಿತ್ತು. ಆದರೆ ಇದರಿಂದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿದ್ದು ಸರ್ಕಾರ ಈಗ ಸಿಬ್ಬಂದಿ ವೇತನ ಕಡಿತಗೊಳಿಸಲು ತೀರ್ಮಾನಿಸಿದ್ದು ಖಂಡನೀಯ ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಕಾಲೇಜು ಶಿಕ್ಷಕ ಸಂಘ ದಿನಾಂಕ 16-06-2014 ರಂದು ಬಿಜಾಪುರ ಬಿಎಲ್‌ಡಿ ಮಹಿಳಾ ಮಹಾವಿದ್ಯಾಲಯದಲ್ಲಿ  ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಈ ಸಭೆಯಲ್ಲಿ ಕರ್ನಾಟಕ ಸರ್ಕಾರ ಉಭಯ ಸದನಗಳಲ್ಲಿ ಕಾಯ್ದೆ ಪಾಸುಮಾಡಿದ್ದು ಸಹಿತ ಸರಿಯಾದದ್ದಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈ ವಿಷಯ್ನ ಗಂಭಿರವಾಗಿ ಪರಿಗಣಿಸಿ ಪುನಃ ಕಾಯ್ದೆ ತಿದ್ದುಪಡಿ ಮಾಡಿ ಸಿಬ್ಬಂದಿಗೆ ಆಗುವ ತೊಂದರೆಯನ್ನ್ನು ನಿವಾರಿಸಬೇಕೆಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿತು. ಸರಕಾರ ಸಕಾರಾತ್ಮಕ ಸ್ಪಂದಿಸದಿದ್ದರೆ ಹೋರಾಟವು ಅನಿವಾರ್ಯವಾಗುತ್ತದೆಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.  
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಕಾಲೇಜು ಶಿಕ್ಷಕರಿಗೆ ಕೊಡಬೇಕಾದ ಯು.ಜಿ.ಸಿ. ವೇತನ ಬಾಕಿ ನೀಡಲು ಹಾಗೂ ಪ್ರಾಂಶುಪಾಲರ ಹುದ್ದೆಗಳನ್ನು ತುಂಬಿಕೊಳ್ಳಲು ಕ್ರಮ ಕೈಕೊಳ್ಳಬೇಕೆಂದು ಡಾ.ಲಿಂಗರಾಜ ಅಂಗಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಲ್ಲದೇ ಅನುದಾನ ರಹಿತ ಮಹಿಳಾ ಮಹಾವಿದ್ಯಾಲಯಗಳಿಗೆ ಅನುದಾನ ನೀಡಲು ಸಹಿತ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಘದ ಪದಾಧಿಕಾರಿಗಳಾದ ಪ್ರೊ. ಎಸ್.ಎಸ್.ರಾಂಪುರೆ, ಪ್ರೊ.ಜಿ.ಎಂ.ನಾಡಿಗೇರ, ಡಾ.ನಾಗೇಂದ್ರ ಮಸೂತಿ, ಡಾ.ಡಿ.ಬಿ.ಕೋಟಿ, ಪ್ರೊ. ವಿ.ಎಸ್.ಕಟ್ಟಿಮಠ ಮುಂತಾದವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com