ಧಾರವಾಡ: ಆಚಾರ್ಯ ತುಳಸಿ ಅವರ ಜನ್ಮಶತಾಬ್ದಿ ಅಂಗವಾಗಿ ಅನುರತ ಆಂತೋಲನದ ಜನಜಾಗೃತಿ ನಿಮಿತ್ತ ಭಾನುವಾರ ಶ್ರಮಣಜಿ ಕಂಚನ್ ಪ್ರಜ್ಞಾಜಿ, ಶ್ರಮಣಜಿ ಗೌತಮ್ ಪ್ರಜ್ಞಾಜಿ, ಶ್ರಮಣಜಿ ರಸನೀಯ ಪ್ರಜ್ಞಾಜಿ ನೇತೃತ್ವದಲ್ಲಿ ಧಾರವಾಡದಲ್ಲಿ ಶೋಭಾಯಾತ್ರೆ ನಡೆಯಿತು.
ಜೈನ ಸಮಾಜದ ವತಿಯಿಂದ ಕಡಪಾ ಮೈದಾನದಿಂದ ಹೊರಟ ಶೋಭಾಯಾತ್ರೆ, ಪಾಲಿಕೆ ವೃತ್ತ, ಹಳೇ ಬಸ್ ನಿಲ್ದಾಣ, ಸುಭಾಸ ರಸ್ತೆ, ಗಾಂಧಿಚೌಕ್ ಮೂಲಕ ಸಂಚರಿಸಿ ರವಿವಾರಪೇಟೆ ಜೈನ ಮಂದಿರಕ್ಕೆ ಹೋಗಿ ಸಮಾಪ್ತಿಯಾಯಿತು.
ಅನುರತ ಆಂದೋಲನದ ಮಹತ್ವವನ್ನು ವಿಡಿಯೋಚಿತ್ರದ ಮೂಲಕ ಪ್ರದರ್ಶಿಸಲಾಯಿತು. ಸಮಾಜದ ಮುಖಂಡರಾದ ಮಾಣಿಕ ರಾಠೋಡ, ಚಂಪಾಲಾಲ್ ಸೇಮಲಾನಿ, ರಾಯಚಂದ್ರ ಛೋಪ್ರಾ, ಲಲಿತ ಭಂಡಾರಿ, ನಿಲೇಶ ಪಾಲ್ಗೋತಾ, ಸತೀಶ ಮೆಹ್ತಾ, ಅಮರಚಂದ ಜೈನ್, ಮದನ್ ಪೋರವಾಲ್ ಇದ್ದರು.