ಗಜೇಂದ್ರಗಡ: ಗ್ರಾಮೀಣ ಬಡಜನರ ಅಭ್ಯುದಯವೇ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮುಖ್ಯ ಧ್ಯೇಯವಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ರಾಜಶೇಖರ ಅಡಿಕೆನ್ನವರ ಹೇಳಿದರು. ಸಮೀಪದ ನಾಗೇಂದ್ರಗಡ ಗ್ರಾಮದಲ್ಲಿ ಬ್ಯಾಂಕ್ ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರ ಪ್ರಗತಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಒತ್ತು ನೀಡಿದೆ ಎಂದರು. ರೋಣ ಶಾಖೆಯ ವ್ಯವಸ್ಥಾಪಕ ಬಿ.ಎಸ್. ಬನ್ನಿಗೋಳ ಮಾತನಾಡಿದರು. ಸೂಡಿ ಶಾಖೆಯ ವ್ಯವಸ್ಥಾಪಕ ಸಿ.ಪಿ. ಕುಲಕರ್ಣಿ, ಎಸ್.ಎನ್. ಹಿರೇಮಠ, ಕಲ್ಲಯ್ಯ ಮಠದ, ಅಶೋಕ ಜಿಗಳೂರ, ಸುರೇಶ ಮಠದ, ಭೀಮಪ್ಪ ಹಂಡಿ, ಮುತ್ತಯ್ಯ ವಸ್ತ್ರದ, ಬಸಯ್ಯ ಕಾರಡಗಿ ಇದ್ದರು.
ಮಿತ್ರಮಂಡಳಿ ಸಭೆ
ಹೊಳೆಆಲೂರು: ಇಲ್ಲಿನ ಹವ್ಯಾಸಿ ನಾಟಕ ಕಲಾವಿದರ ಶ್ರೀ ಕಲಾ ರಸಿಕರ ಮಿತ್ರಮಂಡಳಿ ಪ್ರಸ್ತುತ ವರ್ಷ ಯಚ್ಚರೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಪ್ರಯೋಗಿಸಬೇಕಾದ ನಾಟಕ ಕುರಿತು ಪೂರ್ವಭಾವಿ ಸಭೆ ಶುಕ್ರವಾರ ಜರುಗಿತು. ಸಂಘದ ಗೌರವಾಧ್ಯಕ್ಷ ಯಚ್ಚರಪ್ಪ ಜಡಮಳಿ, ಉಪಾಧ್ಯಕ್ಷ ಮಲ್ಲು ಕಂಠಿ ಮುಂತಾದವರು ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹನುಮಂತ ನವನಳ್ಳಿ ವಹಿಸಿದ್ದರು. ಕಲಾವಿದರಾದ ಬಸವರಾಜ ಪಟ್ಟದಕಲ್ಲ, ನಿರ್ದೇಶಕ ಅಶೋಕ ಹಡಪದ, ಸಂಗೀತ ನಿರ್ದೇಶಕ ಮಲ್ಲು ಹೊಸಳ್ಳಿ, ಎ.ಎಸ್. ಪಾಟೀಲ, ಬಸವರಾಜ ಮೇಟಿ, ಪವಾಡೆಪ್ಪ ಹವಾಜಿ, ವಸಂತ ಪವಾರ, ಹುಚ್ಚೇಶ ಶಿಂಧೆ, ಬಸವರಾಜ ತಮನಾಳ, ಲಿಂಗಬಸು ಅಂಗಡಿ, ಡಾ. ಪ್ರಭು ಗಂಜಿಹಾಳ, ಸಂಘದ ಸದಸ್ಯರು ಉಪಸ್ಥಿತರಿದ್ದರು.