ವಿಶ್ವ ತಾಯಂದಿರ ದಿನಾಚರಣೆ

Updated on: 

ಧಾರವಾಡ: ಇಲ್ಲಿನ ಕೆಲಗೇರಿ ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ವಿಶ್ವ ತಾಯಂದಿರ ದಿನದ ಅಂಗವಾಗಿ ಸಾಲು ಮರದ ತಿಮ್ಮಕ್ಕ ಅವರಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಿಮ್ಮಕ್ಕ ಮಾತನಾಡಿ, ನನಗೆ ಮಕ್ಕಳಿಲ್ಲದಿದ್ದರೂ, ನಾನೆಂದು ಆ ತಾಯ್ತನವನ್ನು ಕಳೆದುಕೊಂಡಿಲ್ಲ, ಅದೆಲ್ಲವನ್ನು ನಾನು ಹಚ್ಚಿ, ಬೆಳೆಸಿ, ಪೋಶಿಸಿ ಇವತ್ತು ಎಲ್ಲರಿಗೂ ನೆರೆಳು ನೀಡುತ್ತಿರುವ ಮರಗಳಿಂದ ತುಂಬಿಕೊಂಡಿದ್ದೇನೆ. ಅದಕ್ಕಾಗಿ ಎಲ್ಲ ಮಕ್ಕಳು  ತಾಯಂದಿರ ದಿನದಂದು ಸಸಿ ನೆಡುವುದರ ಮೂಲಕ ತಾಯಿಗೆ ಗೌರವವನ್ನು ಸಲ್ಲಿಸಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆ ಪ್ರಾಂಶುಪಾಲ ಗುರು  ಹೆಗ್ಗಡೆ, ತಿಮ್ಮಕ್ಕ ಬಡತನದ ಮಧ್ಯೆ ಅಮೋಘ ಸಾಧನೆ ಮಾಡಿದ್ದಾರೆ. ತಮ್ಮ ಸಾಧನೆಗೆ ಬಡತನವನ್ನು ಜರೆಯದೆ ಪರಿಸರದ ಕೆಲಸ ದೇವರ ಕೆಲಸ ಎಂದು ನಂಬಿ ಜೀವನದಲ್ಲಿ ಸಾಫಲ್ಯ ಕಂಡ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ವಿದ್ಯಾರ್ಥಿಗಳು ತಿಮ್ಮಕ್ಕನವರ ಆಸೆಯಂತೆ ಪ್ರತಿಬಾರಿಯೂ ತಾಯಂದಿರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡಿದಾಗ ನಿಜವಾಗಿಯೂ ತಾಯಿಗೆ ಗೌರವಿಸಿದಂತೆ ಎಂದರು.
ತಿಮ್ಮಕ್ಕನವರ ಸಾಕುಮಗ ಬಿ.ಎಲ್. ಉಮೇಶ, ಪ್ರಕಾಶ ಗೌಡರ, ಅನಿಲ ಅಳ್ಳೊಳ್ಳಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com