703 ಯುವಕರಿಗೆ ಉದ್ಯೋಗ ಭಾಗ್ಯ

Updated on: 

ಧಾರವಾಡ: ಇಲ್ಲಿಯ  ಭಾವಸಾರ ಮಂಗಲ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.
ಉದ್ಯೋಗ ಸಮಯ ಪತ್ರಿಕೆ, ಕರ್ನಾಟಕ ಥಿಂಕರ್ಸ್ ಫೋರಂ ಹಾಗೂ ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಭಾವಸಾರ ಮಂಗಲ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉದ್ಯೋಗ ಸರಳ ಯೋಜನೆ ಹಾಗೂ ಬೃಹತ್ ಉದ್ಯೋಗ ಮೇಳದಲ್ಲಿ ಒಟ್ಟು 703 ಜನ ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡರು.
ಈ ಉದ್ಯೋಗ ಮೇಳದಲ್ಲಿ ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಕಾರವಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟು 1,600 ಜನ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ಪ್ರತಿಷ್ಠಿತ ಕಂಪನಿಗಳಾದ ಟ್ಯಾಲಿ, ಪೋಸ್ಟ್ ಜಾಬ್, ಫಸ್ಟ್ ಸೋರ್ಸ್, ಟೆಕ್ನೋ ಮಹೀಂದ್ರಾ, ಇನ್ಫೋಸಿಸ್, ಯುರೇಕಾ ಫಾರ್ಮ್ಸ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಒಟ್ಟು 35 ಖಾಸಗಿ ಕಂಪೆನಿಗಳು ಪಾಲ್ಗೊಂಡಿದ್ದವು. ಮಂಗಳವಾರ ಹಮ್ಮಿಕೊಂಡಿದ್ದ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಕಂಪೆನಿಗಳ ಅರ್ಹ ಅಭ್ಯರ್ಥಿಗಳನ್ನು ಸ್ಥಳದಲ್ಲಿಯೇ ಆಯ್ಕೆ ಮಾಡಿ, ಅಭ್ಯರ್ಥಿಗಳಿಗೆ ಆಯ್ಕೆ ಪ್ರಮಾಣ ಪತ್ರವನ್ನೂ ನೀಡಿದರು.
ಯಾವುದೇ ಪದವಿ, ಐಟಿಐ, ಡಿಪ್ಲೋಮಾ, ಬಿಇ, ಬಿಸಿಎ, ಬಿಕಾಂ, ಎಂಜಿನಿಯರಿಂಗ್, ಇತರ ಶಿಕ್ಷಣ ಪಡೆದ ವಿದ್ಯಾರ್ಥಿಗಳೂ ಉದ್ಯೋಗ ಪಡೆದುಕೊಂಡರು. ಶಾಸಕ ಎನ್.ಎಚ್. ಕೋನರಡ್ಡಿ, ಸಂತೋಷ ಪಾಟೀಲ, ಸಾವಿತ್ರಿ ಬಡಿಗೇರ, ಗೀತಾ ಅಂಗಡಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com