ಹುಬ್ಬಳ್ಳಿ: ನಾಗರ ಹಾವಿನ ವಿಷ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಿಳಿ ಬಣ್ಣದ ಫೋರ್ಡ್ ಕಾರಿನಲ್ಲಿ (ಕೆಎ04, ಟಿವೈ 7765) ನಾಗರ ಹಾವಿನ ವಿಷ ಸಾಗಿಸುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಹಳೇಹುಬ್ಬಳ್ಳಿ ಕಾರವಾರ ರಸ್ತೆಯ ಕೆಇಬಿ ಗ್ರಿಡ್ ಬಳಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಆಲವಳ್ಳಿ ಗ್ರಾಮದ ವಾಗೀಶ ವೀರಭದ್ರಗೌಡ (30), ಕೆಂಚನಾಲ ಗ್ರಾಮದ ಪುಟ್ಟಪ್ಪ ಸಿದ್ದಪ್ಪ (40), ಆಲವಳ್ಳಿ ಗ್ರಾಮದ ಗೌಡ್ರು ವೀರಭದ್ರಪ್ಪ (67), ಶಿರಸಿ ಜವಳಗುಂಡಿ ಕ್ರಾಸ್ನ ನವೀನ ನಾರಾಯಣ ಶೆಟ್ಟಿ (24) ಹಾಗೂ ಪ್ರದೀಪ ಸುರೇಶ ರೇವಣಕರ (26) ಎಂದು ಗುರುತಿಸಲಾಗಿದೆ.