ಧಾರವಾಡದಲ್ಲೂ ಸಂಭ್ರಮಾಚರಣೆ

Updated on: 

ಧಾರವಾಡ: ಮತ ಎಣಿಕೆ ಕೇಂದ್ರದ ಎದುರು ಬಣ್ಣ ಎರಚಿ ಸಂಭ್ರಮಿಸಿದ್ದಲ್ಲದೇ ಪ್ರಹ್ಲಾದ ಜೋಶಿ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ನಗರದ ಸುಭಾಸ ರಸ್ತೆಯಲ್ಲಿನ ಕಚೇರಿ ಎದುರು ಪಟಾಕಿ ಹಾರಿಸಿ ಶುಕ್ರವಾರ ವಿಜಯೋತ್ಸವ ಆಚರಿಸಿದರು.
ಇದಕ್ಕೂ ಮುಂಚೆ ಪ್ರಹ್ಲಾದ ಜೋಶಿ ಅವರು ಮುರಘಾಮಠಕ್ಕೆ ತೆರಳಿ ಮೃತ್ಯುಂಜಯ ಅಪ್ಪಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರದಲ್ಲಿ ಬಿಜೆಪಿ ದಾಖಲೆ ಗೆಲವು ಸಾಧಿಸಲು ಮೋದಿ ಅಲೆ ಜೊತೆಗೆ ಯುಪಿಎ ಸರ್ಕಾರದ ಆಡಳಿತ ವೈಖರಿಯೂ ಹೌದು. ನನ್ನ ಈ ಜಯ ನನ್ನದಲ್ಲ. ಇದು ಮತದಾರರ ಹಾಗೂ ಕಾರ್ಯಕರ್ತರಿಗೆ ಸಲ್ಲಬೇಕು. ಮತದಾರರ ಆಶೋತ್ತರಗಳಿಗೆ ಸ್ಪಂದಿಸಿ ಪಕ್ಷದ ಕಾರ್ಯಕರ್ತರೊಂದಿಗೆ ಮುಗ್ಧತೆಯಿಂದ ಬೆರೆತು, ಕ್ಷೇತ್ರದಲ್ಲಿಯ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾದವು.  ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ಗದ್ದುಗೆ ಏರಿದ ನಂತರ ರಾಷ್ಟ್ರದ ಅಭಿವೃದ್ಧಿಯ ಜತೆಗೆ ಆರ್ಥಿಕತೆ, ರೈತರ ಬಗ್ಗೆ ಕಾಳಜಿ ವಿದ್ಯಾರ್ಥಿಗಳ ಏಳ್ಗೆಗಾಗಿ ಒಳ್ಳೆಯ ಶಿಕ್ಷಣ ಪದ್ಧತಿ, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕಾರ್ಯ ಮಾಡಲಿದೆ.
ಮಾಜಿ ಮಂತ್ರಿ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಶಿಲ್ಪಾ ಶೆಟ್ಟರ್, ಜ್ಯೋತಿ ಜೋಶಿ, ಸೀಮಾ ಮಸೂತಿ, ಮೇಯರ ಶಿವು ಹಿರೇಮಠ, ಉಪಮಹಾಪೌರ ಮಂಜುಳಾ ಅಕ್ಕೂರ,  ಲಿಂಗರಾಜ ಪಾಟೀಲ, ಮಹೇಶ ಟೆಂಗಿನಕಾಯಿ, ಲಿಂಬಣ್ಣವರ, ಷಣ್ಮುಖ ಗುರಿಕಾರ, ಪ್ರಕಾಶ ಗೋಡಬೋಲೆ, ಈರೇಶ ಅಂಚಟಗೇರಿ, ದತ್ತಾ ಡೋರ್ಲೆ, ಮೋಹನ ರಾಮದುರ್ಗ, ಸುನೀಲ ಸರೂರ, ಶಿವಣ್ಣ ಬಡವಣ್ಣನವರ, ಸಂಜಯ ಕಪಟಕರ, ಬಲರಾಮ ಕುಸುಗಲ್ಲ, ರಾಮಣ್ಣ ಬಡಿಗೇರ, ಶಂಕರ ಶೇಳಕೆ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com