ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಕಾರ್ಯಕ್ರಮದಲ್ಲಿ, ಎಸ್ಡಿಎಂ ದಂತ ವೈದ್ಯಕೀಯ ಕಾಲೇಜಿನ ಮತ್ತು ಆಸ್ಪತ್ರೆಯ ಡಾ. ಪ್ರಶಾಂತ ಬಟ್ಟೆಪಾಟಿ ಮೇ 27ರಂದು ಸಂಜೆ 6.50ರಿಂದ 7.20ರ ವರೆಗೆ ಮಕ್ಕಳ ಹಲ್ಲಿನ ಆರೋಗ್ಯ ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ತಮ್ಮ ಪ್ರಶ್ನೆಗಳನ್ನು 0836-2443414, 2443415 ಅಥವಾ 2443416 ಕೇಳುಬಹುದೆಂದು ಪ್ರಕಟಣೆ ತಿಳಿಸಿದೆ.
ದೃಶ್ಯಕಲಾ ತರಗತಿಗೆ ಅರ್ಜಿ
ಧಾರವಾಡ: ಇಲ್ಲಿಯ ಕೆಲಗೇರಿಯ ಜೆಎಸ್ಎಸ್ ಕಾಲೇಜಿನಲ್ಲಿ ಚಿತ್ರಕಲೆಯ ಬ್ಯಾಚುಲರ್ ಆಫ್ ವಿಜ್ಯುವಲ್ ಆರ್ಟ್, ಪ್ರಥಮ ವರ್ಷದ ದೃಶ್ಯ ಕಲಾ ಮೂಲ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ದೃಶ್ಯ ಕಲಾ ಮೂಲ ಪ್ರಥಮ ವರ್ಷದ ತರಗತಿಗೆ ಹತ್ತನೆ ತರಗತಿ ಅಥವಾ ಪಿಯುಸಿ ಫೇಲಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ದ್ವಿತೀಯ ವರ್ಷದ ದೃಶ್ಯ ಕಲಾ ಮೂಲ ತರಗತಿಗೆ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಬ್ಯಾಚುಲರ್ ಅಫ್ ವಿಜ್ಯುವಲ್ ಆರ್ಟ್ನ ಪ್ರಥಮ ವರ್ಷಕ್ಕೆ ದೃಶ್ಯಕಲಾ ಮೂಲ ದ್ವಿತೀಯ ವರ್ಷ ಪಾಸಾಗಿರಬೇಕು. ಪ್ರವೇಶ ಪಡೆಯಲು ಜೂನ್ 30 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 0836-2774574ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.