ಹಾವೇರಿ: ಸಾಮಾಜಿಕ ತಪ್ಪುಗಳನ್ನು ತೋರಿಸುವ ಕೆಲಸಗಳನ್ನು ನಾಟಕಗಳು ಮಾಡುತ್ತಿವೆ ಎಂದು ಹುಕ್ಕೇರಿ ಮಠದ ಸದಾಶಿವ ಶ್ರೀ ಹೇಳಿದರು.
ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಲಿಂ. ಜ. ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀ, ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಸ್ಮರಣೋತ್ಸವ ನಿಮಿತ್ತ ಏರ್ಪಡಿಸಿದ್ದ ಶರಣ ಸಂಸ್ಕೃತಿ ಉತ್ಸವದ ನಾಟಕೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ರಂಗಭೂಮಿ ಪ್ರಸ್ತುತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಸಾಮಾಜಿಕ ಸಮಸ್ಯೆಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವ ಪ್ರಮುಖ ಮಾಧ್ಯಮವಾಗಿ ನಾಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಡಾ. ಜಿ.ಎನ್. ಮಲ್ಲಿಕಾರ್ಜುನ, ಪ್ರಸನ್ನ ಜೆ. ಮಾತನಾಡಿದರು. ಗುರುನಂಜೇಶ್ವರ ಶಿವಾಚಾರ್ಯ ಶ್ರೀ, ಅಭಿನವರುದ್ರ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಬಸವಶಾಂತಲಿಂಗ ಶ್ರೀ ಸಾನ್ನಿಧ್ಯ ವಹಿಸಿದ್ದರು. ಶಿವಲಿಂಗು, ರಾಧಾಕೃಷ್ಣ ಪಲ್ಲಕ್ಕಿ ಇತರರಿದ್ದರು.