ಗದಗ: ಜಿಲ್ಲಾ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸಭೆಯನ್ನು ಫೆ. 7ರ ಬೆಳಗ್ಗೆ 11 ಗಂಟೆಗೆ ಗದಗ ಜಿಲ್ಲಾ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದೆ.
ಅತಿಥಿಗಳಾಗಿ ಪಕ್ಷದ ಮುಖಂಡ ವೈ.ಎನ್. ಗೌಡರ, ಅನಿಲ ಮೆಣಸಿನಕಾಯಿ ಭಾಗವಹಿಸುವರು. ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಗಂಗಣ್ಣ ಮಹಾಂತಶಟ್ಟರ್ ವಹಿಸುವರು. ಪಕ್ಷದ ಮುಖ್ಯ ಘಟಕ, ಮಹಿಳಾ ಘಟಕ, ವಿಧ್ಯಾರ್ಥಿ ಘಟಕ, ಯುವ ಘಟಕ, ಎಸ್ಸಿ ಘಟಕ, ಎಸ್ಟಿ ಘಟಕ, ಹಿಂದುಳಿದ ಘಟಕ, ಅಲ್ಪಸಂಖ್ಯಾತರ ಘಟಕ ಮತ್ತು ರೈತ ಘಟಕಗಳ ಎಲ್ಲ ಜಿಲ್ಲಾ ಪದಾಧಿಕಾರಿಗಳು ಹಾಗೂ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪಕ್ಷದ ಮುಖಂಡ ಎಸ್.ಎಚ್. ಶಿವನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.