ಗದಗ: ಬಣಜಿಗ ಸಮಾಜದ ಹಿರಿಯರು, ಜನಸೇವಾ ಸಮಿತಿ ಅಧ್ಯಕ್ಷ ಬಸಪ್ಪ ಗುರಪ್ಪ ಹುಬ್ಬಳ್ಳಿ (85) ಬುಧವಾರ ನಿಧನರಾದರು. ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು, ಅಪಾರ ಬಂಧು-ಬಳಗ ಹೊಂದಿದ್ದರು.
ಯುವತಿ ಆತ್ಮಹತ್ಯೆ
ರೋಣ: ಮೈ ಮೇಲೆ ಅಲ್ಲಲ್ಲಿ ಬಿಳಿ ಮಚ್ಚೆಯಿದ್ದು, ಮಾನಸಿಕವಾಗಿ ನೊಂದು ತಾಲೂಕಿನ ಕುರಹಟ್ಟಿ ಗ್ರಾಮದ ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ. ಮೃತಳನ್ನು ಶಂಕ್ರವ್ವ ಗಂಗಯ್ಯ ನಂದಿಕೇಶ್ವರ (21) ಎಂದು ಗುರುತಿಸಲಾಗಿದೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಮಹಿಳೆ ಸಾವು
ನರಗುಂದ: ಪಟ್ಟಣದ ಹೊರವಲಯದ ಹುಬ್ಬಳ್ಳಿ ಸೊಲ್ಲಾಪೂರ ಹೆದ್ದಾರಿಯ ರೋಖಡೆಶೆಡ್ ಸಮೀಪ ಅಪರಿಚಿತ ವಾಹನವೊಂದು ಪಾದಾಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ. ಮೃತಳನ್ನು ನರಗುಂದ ಪಟ್ಟಣದ ಈರಮ್ಮ (45) ಎಂದು ಗುರುತಿಸಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.