ಗಜೇಂದ್ರಗಡ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಡಿಸಿದ ಶುಕ್ರವಾರ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ನಲ್ಲಿ ಗಜೇಂದ್ರಗಡವು ಹೊಸ ತಾಲೂಕಾಗಿ ಘೋಷಣೆಯಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು.
ಬಿಜೆಪಿ ಕಾರ್ಯಕರ್ತರು ಜಯಘೋಷದೊಂದಿಗೆ ಸ್ಥಳೀಯ ಕಾಲಕಾಲೇಶ್ವರ ವೃತ್ತ, ದುರ್ಗಾವೃತ್ತ ಹಾಗೂ ಬಸವೇಶ್ವರ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಿದ್ದಣ್ಣ ಬಂಡಿ, ಪುರಸಭೆ ಉಪಾಧ್ಯಕ್ಷ ಭಾಸ್ಕರ ರಾಯಬಾಗಿ, ಎಪಿಎಂಸಿ ಅಧ್ಯಕ್ಷ ಪರಶುರಾಮ ಹಂಡಿ, ಅಂಬರೇಶ ಅರಳಿ, ಚನ್ನಬಸು ವಾಲಿ, ಟಿ.ವಿ. ರಾಯಬಾಗಿ, ಅಂಬರೇಶ ಬಳಿಗೇರ, ಪ್ರಭು ಚವಡಿ, ಬಸವರಾಜ ಬಂಕದ, ಕನಕಪ್ಪ ಅರಳಿಗಿಡದ, ಶರಣಪ್ಪ ಚಳಗೇರಿ, ಯಲ್ಲಪ್ಪ ಬಂಕದ, ಚಂದ್ರಶೇಖರ ಚಳಗೇರಿ, ಎ.ಬಿ. ಲೋದಿ, ರಾಜೇಂದ್ರ ಘೋರ್ಪಡೆ ಮುಂತಾದವರು ಉಪಸ್ಥಿತರಿದ್ದರು.