ಗಜೇಂದ್ರಗಡ ತಾಲೂಕು ರಚನೆಗಾಗಿ ಹೋರಾಟದ ಪ್ರತಿಫಲವಾಗಿ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿರುವುದು ಹೋರಾಟಕ್ಕೆ ಸಂದ ಜಯವಾಗಿದೆ.
- ವೀರಣ್ಣ ಸೊನ್ನದ
ಗಜೇಂದ್ರಗಡ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ
ಗಜೇಂದ್ರಗಡ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವುದು ಸಂತಸ ತಂದಿದೆ. ಸಚಿವ ಬಂಡಿ, ಸಿಎಂ ಶೆಟ್ಟರ್ಗೆ ಗಜೇಂದ್ರಗಡ ಭಾಗದ ಜನತೆಯ ಪರವಾಗಿ ಅಭಿನಂದನೆ.
- ಜಿ.ಎಸ್. ಪಾಟೀಲ್ ಮಾಜಿ ಶಾಸಕ
ಸಿಎಂ ಜಗದೀಶ ಶೆಟ್ಟರ್ ರೈತಪರ ಹಾಗೂ ಬಡವರ ಪರವಾದ ಬಜೆಟ್ ಮಂಡಿಸಿದ್ದಾರೆ. 43 ಹೊಸ ತಾಲೂಕುಗಳನ್ನು ಮಾಡುವ ಮೂಲಕ ಜನಪರವಾದ ಬಜೆಟ್ ಮಂಡನೆ ಮಾಡಿದ್ದಾರೆ.
- ಕರಬಸಪ್ಪ ಹಂಚಿನಾಳ. ಬಿಜೆಪಿ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಅಧ್ಯಕ್ಷ
ಲಕ್ಷ್ಮೇಶ್ವರವನ್ನು ತಾಲೂಕಾಗಿ ಮಾಡಿದ ರಾಜ್ಯದ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿಯವರಿಗೆ ಧನ್ಯವಾದಗಳು.
- ಎಂ.ಎಸ್. ದೊಡ್ಡಗೌಡರ, ಗದಗ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು
ಸಿಎಂ ಜಗದೀಶ ಶೆಟ್ಟರ್ ನುಡಿದಂತೆ ನಡೆದು, ಲಕ್ಷ್ಮೇಶ್ವರವನ್ನು ತಾಲೂಕನ್ನಾಗಿ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಧನ್ಯವಾದಗಳು. ಅದೇ ರೀತಿ ಲಕ್ಷ್ಮೇಶ್ವರವನ್ನು ತಾಲೂಕಾಗಿ ಮಾಡಲು ಸಹಕರಿಸಿದ ಎಲ್ಲ ಮಹನೀಯರಿಗೂ ಅಭಿನಂದನೆ.
- ಗಂಗಣ್ಣ ಮಹಾಂತಶೆಟ್ಟರ್, (ಮಾಜಿ ಶಾಸಕರು)
ಲಕ್ಷ್ಮೇಶ್ವರ ತಾಲೂಕು ರಚನೆ ಅತೀವ ಸಂತೋಷವಾದ ದಿನವಾಗಿದೆ. 40ಕ್ಕೂ ಹೆಚ್ಚೂ ವರ್ಷಗಳಿಂದ ಮಾಡಿದ ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಉತ್ತರ ಕರ್ನಾಟಕದ ಪಾಲಿಗೆ, ಗದಗ ಜಿಲ್ಲೆಗೆ ಹೆಮ್ಮೆಯ ಸಂಗತಿ.
- - ಜಿ.ಎಸ್. ಗಡ್ಡದೇವರಮಠ, ಮಾಜಿ ಶಾಸಕ
ಲಕ್ಷ್ಮೇಶ್ವರ ತಾಲೂಕಾಗಿ ಮಾಡಿದ ಸರ್ಕಾರಕ್ಕೆ ಅಭಿನಂದನೆಗಳು. ತುಂಬಾ ಸಂತೋಷವಾಗಿದೆ. ತಾಲೂಕಾಗಲು ಹೋರಾಟ ನಡೆಸಿದ ಎಲ್ಲ ಹೋರಾಟಗಾರರ ಹಾಗೂ ತಾಲೂಕಿನ ಎಲ್ಲ ಜನತೆಗೆ ಸಿಕ್ಕ ಜಯವಾಗಿದೆ.
- ಬಸವರಾಜ ಬಾಳೇಶ್ವರಮಠ, ನ್ಯಾಯವಾದಿ
ರಾಜ್ಯ ಸರ್ಕಾರ ನೀಡಿರುವ ಬಜೆಟ್ ಜನವಿರೋಧಿ. ಕೇವಲ ಮುಂಬರುವ ಚುನಾವಣೆಯನ್ನು ಮುಂದಿಟ್ಟುಕೊಂಡು ಬಜೆಟ್ ಮಂಡಿಸಿದ್ದು, ಯಾವುದೇ ಹೊಸತನವಿಲ್ಲ. ಇವರಿಗೆ ಬಡವರ, ಹಿಂದುಳಿದವರ ಕಾಳಜಿಯಂತೂ ಇಲ್ಲವೇ ಇಲ್ಲ. ಬಿಜೆಪಿಯ ಪ್ರಣಾಳಿಕೆಯಂತಿದೆ.
- ಹನುಮಂತಗೌಡ ಕಲ್ಮನಿ, ಜೆಡಿಎಸ್ ಮುಖಂಡ, ನರಗುಂದ
ಕೈಗಾರಿಕೆಗಳ ಉತ್ತೇಜನಕ್ಕೆ ಯಾವುದೇ ಹೊಸತನವನ್ನೂ ನೀಡಿಲ್ಲ, ಸಾರ್ವಜನಿಕರ ಉದ್ದಿಮೆ ಸ್ಥಾಪನೆ ನಿಟ್ಟಿನಲ್ಲಿಯೂ ಸರ್ಕಾರ ಹೊಸ ಯೋಜನೆ ರೂಪಿಸಿಲ್ಲ, ಇದೊಂದು ಚುನಾವಣೆಯ ಪೂರ್ವ ತಯಾರಿಯ ಬಜೆಟ್.
- ಅಂದಾನಪ್ಪ ನವಲಗುಂದವ್ಯಾಪಾರಿ. ರೋಣ
ಸಿಎಂ ಶೆಟ್ಟರ್ ಮಂಡಿಸಿರುವ ಬಜೆಟ್ ಬಿಜೆಪಿ ಪ್ರಣಾಳಿಕೆಯಂತಿದೆ. ಯಾವುದೇ ಹೊಸತನವಿಲ್ಲ. ಬಡವರು, ದಲಿತರು ಸೇರಿದಂತೆ ಹಿಂದುಳಿದವರನ್ನು ಕಡೆಗಣಿಸಲಾಗಿದೆ ಈ ಬಜೆಟ್ನಿಂದ ರಾಜ್ಯಕ್ಕೆ ಹೊಸ ಯೋಜನೆಗಳಿಲ್ಲ.
- ಸಿದ್ದು ಪಾಟೀಲ, ಕಾಂಗ್ರೆಸ್ ಯುವ ಮುಖಂಡ, ರೋಣ