ನರಗುಂದ: ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2012-13ನೇ ಸಾಲಿನ ಎನ್ಎಸ್ಎಸ್ ಶಿಬಿರವನ್ನು ತಾಲೂಕಿನ ಅರಿಷಣಗೋಡಿ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಫೆ. 13ರ ಸಂಜೆ 6 ಗಂಟೆಗೆ 'ಯುವಕರಲ್ಲಿ ಕಾನೂನು ಪ್ರಜ್ಞೆ' ಕುರಿತು ಉಪನ್ಯಾಸ ಜರುಗಲಿದೆ. ಸಿಪಿಐ ಪ್ರಶಾಂತ ಸಿದ್ದನಗೌಡ್ರ, ಸುರೇಶ ಎಚ್.ಎಸ್, ಶಿವಾನಂದ ಹಲಗತ್ತಿ, ಡಾ. ವಿ.ಜಿ. ಹಳಕಟ್ಟಿ, ಹನುಮಂತ ನೆಲಗುಡದ, ಎಚ್.ಎನ್. ಹಳಕಟ್ಟಿ, ವಿಠ್ಠಲರಡ್ಡಿ ರಾಯರಡ್ಡಿ, ಆರ್.ವಿ. ಮೇಟಿ, ಶಂಕ್ರಪ್ಪ ಮುಂಡಾಸದ, ಜಯರಾಜ ಹಿರೇನಾಯ್ಕರ, ವಾಸುರಡ್ಡಿ ಮೇಟಿ, ಪಾಂಡಪ್ಪ ಮೇಟಿ, ಫಕೀರಪ್ಪ ಚಿಪ್ಪಲಕಟ್ಟಿ ಉಪಸ್ಥಿತರಿರುವರು.
ಇಂದು ಧರಣಿ
ಗದಗ: ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗದಗ ಜಿಲ್ಲಾ ಘಟಕದಿಂದ ಫೆ. 13ರ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಫ್. ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.