ನರೇಗಲ್ಲ: ಸಮೀಪದ ಹಾಲಕೇರಿ ಅನ್ನದಾನ ಶಿವಯೋಗಿಗಳ 100ನೇ ಪುಣ್ಯಾರಾಧನೆ ಶತಮಾನೋತ್ಸವದ ಅಂಗವಾಗಿ ಆ. 2ರಂದು ಬೆಳಗ್ಗೆ 11ಕ್ಕೆ ಹಾಲಕೇರಿಯಲ್ಲಿ ಉಳವಿ ಚನ್ನಬಸವೇಶ್ವರ ಮಹಾಮನೆ ಉದ್ಘಾಟನೆ ಜರುಗಲಿದೆ. ಉಜ್ಜಯನಿಯ ಮರುಳಸಿದ್ಧ ಶಿವಾಚಾರ್ಯ ಶ್ರೀಗಳು ಉದ್ಘಾಟಿಸುವರು. ಮುಪ್ಪಿನ ಬಸವಲಿಂಗ ಶ್ರೀಗಳ ನವೀಕೃತ ಗದ್ದುಗೆ ಹಾಗೂ ಗೋಪುರ ಕಳಸಾರೋಹಣವನ್ನು ರಾಯಚೂರು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ನೆರವೇರಿಸುವರು. ಅನ್ನದಾನ ಶ್ರೀಗಳ ನೂತನ ಭವ್ಯ ಗೋಪುರದ ಉದ್ಘಾಟನೆಯನ್ನು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ನೆರವೇರಿಸುವರು.
ಮಧ್ಯಾಹ್ನ 12ಕ್ಕೆ ಹಿರಿಯ ಅನ್ನದಾನ ಶ್ರೀಗಳ ಪುಣ್ಯಾರಾಧನೆ ಶತಮಾನೋತ್ಸವ ಉದ್ಘಾಟನೆ, 5001 ಮುತ್ತೈದೆಯರಿಗೆ ಉಡಿತುಂಬುವ ಸಮಾರಂಭದಲ್ಲಿ ಶ್ರೀಮಠದ ನಿಯೋಜಿತ ಉತ್ತರಾಧಿಕಾರಿ ಮುಪ್ಪಿನಬಸವಲಿಂಗದೇವರು, ದರೂರಿನ ಕೊಟ್ಟೂರು ದೇಶಿಕರು ಸಮ್ಮುಖ ವಹಿಸುವರು. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಶಾಸಕ ಜಿ.ಎಸ್. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಸಂಸದ ಕರಡಿ ಸಂಗಣ್ಣ, ಪಿ.ಸಿ. ಗದ್ದಿಗೌಡ್ರ, ಮಾಜಿ ಸಚಿವ ರಾಣಿ ಸತೀಶ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ, ವೀರಣ್ಣ ಚರಂತಿಮಠ, ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ವಿಪ ಸದಸ್ಯ ಎಸ್.ವಿ. ಸಂಕನೂರ, ಹಾಲಪ್ಪ ಆಚಾರ್, ಜಿಪಂ ಅಧ್ಯಕ್ಷೆ ಶಾಂತವ್ವ ದಂಡಿನ ಉಪಸ್ಥಿತರಿರುವರು.
ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಗಣ್ಯರಿಗೆ ವಚನಾಮೃತ ವಾರಿಧಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ 4ಕ್ಕೆ ಜರುಗಲಿರುವ ಜೈವಿಕ ಇಂಧನ ತಜ್ಞರ ಸಮಾವೇಶದ ಸಾನ್ನಿಧ್ಯವನ್ನು ಚಿತ್ರದುರ್ಗದ ಶಿವಮೂರ್ತಿ ಶ್ರೀ, ಡಾ. ಅನ್ನದಾನ ಶ್ರೀ, ಕೊಪ್ಪಳ ಗವಿಸಿದ್ಧೇಶ್ವರ ಶ್ರೀ ವಹಿಸುವರು.
ನಿಡಸೋಶಿಯ ಜ. ಪಂಚಮ ಶಿವಲಿಂಗ ಶ್ರೀಗಳು ನೇತೃತ್ವ ವಹಿಸುವರು. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಅಧ್ಯಕ್ಷತೆ ವಹಿಸುವರು. ರುದ್ರಮುನಿ ಶ್ರೀಗಳು, ಹುಚ್ಚೇಶ್ವರ ಶ್ರೀಗಳು, ಶಂಕರರಾಜೇಂದ್ರ ಶ್ರೀಗಳು, ಬಸವಲಿಂಗ ಶಿವಾಚಾರ್ಯರು, ಸಂಗನಬಸವ ಶ್ರೀಗಳು ಮುಂತಾದವರು ಉಪಸ್ಥಿತರಿರುವರು. ಶಾಸಕ ಬಸವರಾಜ ರಾಯರಡ್ಡಿ, ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕ ಬಿ.ಆರ್. ಯಾವಗಲ್, ವಿನಯ ಕುಲಕರ್ಣಿ, ಆರ್.ಎಸ್. ಪಾಟೀಲ, ಎನ್.ಎಚ್. ಕೋನರಡ್ಡಿ, ದೊಡ್ಡನಗೌಡ ಪಾಟೀಲ, ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪೂರ, ಅನ್ನಪೂರ್ಣಾ ಕಂದಕೂರಪ್ಪ ಪಾಲ್ಗೊಳ್ಳುವರು. ಆಯುರ್ವೇದ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಆಯುರ್ವೇದ ಪಂಡಿತರಿಗೆ ಆರೋಗ್ಯ ದಾಸೋಹಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.