ನಾವು ಉಪ್ಪಿಟ್ಟು-ಚಹಾಗೆ ಸೀಮಿತವೇ?

Updated on: 

ಶಿರಹಟ್ಟಿ: ಗ್ರಾಪಂಗೆ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬರುತ್ತಿದೆ. ಸದಸ್ಯರಾದ ನಮಗೇ ಇದು ಗೊತ್ತಿಲ್ಲ. ಅಭಿವೃದ್ಧಿ ಕಾರ್ಯ ನಡೆಯದೆ ಜನರೇ ನಮಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಯಳವತ್ತಿ ಗ್ರಾಪಂ ಸದಸ್ಯರಾದ ರಾಧಾ ಬಸವರಾಜ ಗಾಣಗೇರ, ಮಾಬೂಬಿ ಸುಂಕದ ಆರೋಪಿಸಿದರು.
ಶುಕ್ರವಾರ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ವಿರುದ್ಧ ಸಿಟ್ಟಿಗೆದ್ದ ಅವರು, ನಮ್ಮನ್ನು ಮೀಟಿಂಗ್‌ಗೆ ಕರೆಸಿ, ಉಪ್ಪಿಟ್ಟು ತಿಂದು ಚಹಾ ಕುಡಿದು ಹೋಗಲು ಮಾತ್ರ ಸೀಮಿತಗೊಳಿಸಿದ್ದೀರಿ. ವಾರ್ಡ್‌ಗಳಲ್ಲಿ ಸೌಲಭ್ಯಗಳಿಲ್ಲದೆ ಜನತೆ ಪರದಾಡುತ್ತಿದ್ದಾರೆ. ನಾವು ತಲೆ ಎತ್ತಿ ತಿರುಗದಂತಾಗಿದೆ ಎಂದು ಆಕ್ಷೇಪಿಸಿದರು.
ಪಂಚಾಯಿತಿಯ ಮಾರಾಟ ಮಳಿಗೆಯಿಂದ ವಸೂಲಾದ ತೆರಿಗೆ ಹಣ ಬ್ಯಾಂಕ್ ಖಾತೆಗೆ ಜಮಾ ಆಗದೆ ದುರ್ಬಳಕೆಯಾಗಿದ್ದು ಗಮನಕ್ಕೆ ಬಂದಿದೆ. ಯಾವ ದಿನ ಜಮಾ ಆಗಿದೆ ಎಂಬುದರ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಸದಸ್ಯರಾದ ದೊಡ್ಡಸಿದ್ದಪ್ಪ ಸಿಂದಗಿ, ಎಫ್.ಎಸ್. ಹಡಪದ ಆಗ್ರಹಿಸಿದಾಗ ಪಿಡಿಒ, ಅಧ್ಯಕ್ಷರಿಂದ ಸಮರ್ಪಕ ಉತ್ತರ ಬರಲಿಲ್ಲ.
ಖಾತ್ರಿ ಯೋಜನೆಯ ಅನುದಾನದಲ್ಲಿ ಜಲಾನಯನ ಇಲಾಖೆಯಿಂದ ಯಳವತ್ತಿ, ಯತ್ತಿನಹಳ್ಳಿ ಗ್ರಾಮಗಳಲ್ಲಿ # 3 ಲಕ್ಷಕ್ಕೂ ಹೆಚ್ಚು ಮೊತ್ತದಲ್ಲಿ 11 ಹೊಳಗಟ್ಟಿ ನಿರ್ಮಾಣ, # 80 ಸಾವಿರ ವೆಚ್ಚದಲ್ಲಿ 4 ಕೆರೆ ಅಭಿವೃದ್ಧಿ ಮಾಡಿದ್ದರೂ ಫಲಾನುಭವಿಗಳಿಗೆ ಬಿಲ್ ನೀಡುತ್ತಿಲ್ಲ. ಎಂಐಎಸ್ ಆಗಿ ತಾಪಂ ಇಒ ಸಹಿ ಮಾಡಿದ್ದರೂ ಗ್ರಾಪಂ ವಿಳಂಬ ಮಾಡುತ್ತಿದೆ. ಸಭೆಯಲ್ಲೇ ಸ್ಪಷ್ಟ ಉತ್ತರ ಕೊಡಿ ಎಂದು ಮುಖಂಡ ಪ್ರಭು ಸೂರಣಗಿ ಆಗ್ರಹಿಸಿದರು.
ಮಾಡಳ್ಳಿ ಗ್ರಾಮದಿಂದ ಬರದ್ವಾಡ ಗ್ರಾಮದ ರಸ್ತೆ ಅಕ್ಕಪಕ್ಕ ಗುಂಡಿ ತೋಡಿ ಸಸಿ ನೆಟ್ಟಿರುವುದಾಗಿ ಖೊಟ್ಟಿ ದಾಖಲೆ ಸೃಷ್ಟಿಸಿ ಹಣ ದೋಚಿದ್ದಾರೆ. 13ನೇ ಹಣಕಾಸು ಯೋಜನೆಯಲ್ಲಿ ವಿದ್ಯುತ್ ಸಾಮಗ್ರಿ ಖರೀದಿ ನೆಪದಲ್ಲಿ ಸಾದಿಲ್ವಾರ ಬಿಲ್‌ಗೆ ಒಂದೇ ದಿನ ಇಬ್ಬರು ಗ್ರಾಪಂ ಅಧ್ಯಕ್ಷರು ಸಹಿ ಮಾಡಿ, ಅಪರಾ ತಪರಾ ಎಸಗಿದ್ದು, ಸಮಗ್ರ ತನಿಖೆ ಮಾಡುವಂತೆ ಸದಸ್ಯ ಎಫ್.ಎಸ್. ಹಡಪದ ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷ ಬಸವರಾಜ ನಿಲಗುಂದ ಅಧ್ಯಕ್ಷತೆ ವಹಿಸಿದ್ದರು. ಎಫ್.ಕೆ. ಪಾಟೀಲ, ಎಫ್.ಎ. ಪಾಟೀಲ, ಪಿಡಿಓ ಪಿ.ಎಚ್. ಗೋಣೆಮ್ಮನವರ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com