ಎಂಇಎಸ್ ಪುಂಡಾಟಿಕೆವಿರೋಧಿಸಿ ಪ್ರತಿಭಟನೆ

Updated on

ಕನ್ನಡಪ್ರಭ ವಾರ್ತೆ, ಗದಗ, ಆ. 4
ಈಚೆಗೆ ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಕನ್ನಡಾಂಬೆಗೆ ಮಾಡಿರುವ ಅವಮಾನ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಖಂಡಿಸಿ ಸೋಮವಾರ ನ್ಯೂ (ಇಂಡಿಯಾ) ಯುಥ್ಸ್ ಅಸೋಸಿಯೇಶನ್ನ ಕಾರ್ಯಕರ್ತರು ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಬೆಳಗಾವಿ ಜಿಲ್ಲೆಯ ಶಿಳನೋಳಿ ಗ್ರಾಮದಲ್ಲಿ ಮಹಾರಾಷ್ಟ್ರದ ಶಿವಸೇನೆಯ ಮುಖಂಡರು ಹಾಗೂ ಎಂಇಎಸ್ ಕಾರ್ಯಕರ್ತರು ಕರ್ನಾಟಕ ಧ್ವಜವನ್ನು ಭಸ್ಮ ಮಾಡಿರುವುದು ಖಂಡನಾರ್ಹವಾಗಿದೆ. ಎಂಇಎಸ್ ಹಾಗೂ ಶಿವಸೇನಾ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಹಾಗೂ ಈ ಎರಡು ಸಂಘಟನೆಯನ್ನು ನಿಷೇಧಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಲಕ್ಕುಂಡಿ, ಅಕ್ಬರಲಿ ಇರಾಣಿ, ಜೇಸುದಾಸ, ನಜೀರಅಹ್ಮದ ಕುನ್ನಿಭಾವಿ, ಲಕ್ಷಣ ಅಣ್ಣಿಗೇರಿ, ಮಂಜುನಾಥ ದಾಮೋದರ, ಪರಶುರಾಮ ಸಾತಪತಿ, ಬೂದಪ್ಪ ಹುಣಸಿಮರದ, ನೀಲಪ್ಪ ಕೇಲೂರ, ಗಿರೀಶ ಹುಣಶಿಮರದ, ಗುರುರಾಜ ಭಜಂತ್ರಿ, ಆರ್.ಎಲ್. ಮೇಳೆನವರ, ರಾಯಪ್ಪ ಚಕ್ರಸಾಲಿ, ಶಾಮ ತೇರದಾಳ, ಮಾಣಿಕ ಲಕ್ಕುಂಡಿ, ರಾಘು ಶಹಪುರ, ಈಶ್ವರ ಮೇರವಾಡೆ, ಮೋಹನ ತೇರದಾಳ, ಶಫಿ ನವಲಗುಂದ, ಎಂ.ಎ. ಕಲ್ಮನಿ, ಸುನೀಲ ಸಾತಪತಿ, ಜಹಾಂಗೀರ ಉಮಚಗಿ, ರಾಚಪ್ಪ ಗಡಾದ, ರಾಜು ಖಾನಾಪುರ, ಬಾಗಪ್ಪ ಲಕ್ಕುಂಡಿ, ಹನಮಂತ ಭಜಂತ್ರಿ, ಶೇಖು ಕೊಪ್ಪಳ, ಎ.ಜೆ. ಹರ್ಲಾಪುರ, ಬಸವಾರಜ ಗಾಮನಗಟ್ಟಿ, ಮಂಜು ಪಾಟೀಲ, ಮಾಣಿಕ ಲಕ್ಕುಂಡಿ, ಮಂಜು ಹರ್ಲಾಪುರ, ಬಿ.ವಿ. ಕವಲೂರ, ಮಲ್ಲಿಕಾರ್ಜುನ ಗುಜ್ಜಾಯಿ ಹಾಗೂ ಮಹಿಳಾ ಘಟಕದ ನಸೀಮಾ ಇರಾಣಿ, ರಾಧಾಬಾಯಿ ಲಕ್ಕುಂಡಿ, ಸುಮಂಗಲಾ ಹುಚ್ಚನಗೌಡ್ರ, ನಿರ್ಮಲಾ ರೆಡ್ಡಿ, ಪದ್ಮಾವತಿ ಬಳ್ಳಾರಿ, ಸೌಮ್ಯಾ ಜ್ಯೋಶ್ವಾ, ಸುಮಂಗಲಾ ಬಾಗೇವಾಡಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com