ರೋಣ: ಅನಿಯಮಿತ ಲೋಡ್ ಶೆಡ್ಡಿಂಗ್, ಕನಿಷ್ಠ 8 ತಾಸು 3 ಪೇಸ್ ವಿದ್ಯುತ್ ಪೂರೈಕೆ, ಅಕ್ರಮ ಪಂಪ್ಸೆಟ್ ಸಕ್ರಮ ಸೇರಿದಂತೆ ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಪಟ್ಟಣದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ನವಲಗುಂದ ಮಾತನಾಡಿ, ಅನಿಯಮಿತ ಲೋಡ್ ಶೆಡ್ಡಿಂಗ್ನ್ನು ನಿಲ್ಲಿಸಬೇಕು. ಕನಿಷ್ಠ 8 ತಾಸಿಗೂ ಹೆಚ್ಚು ಕಾಲ 3 ಫೇಸ್ ವಿದ್ಯುತ್ ಪೂರೈಸಬೇಕು. ಸುಟ್ಟು ಹೋದ ವಿದುತ್ ಪರಿವರ್ತಕಗಳನ್ನು ತಕ್ಷಣ ಬದಲಿಸಬೇಕು. ಈ ದಿಸೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಶೋಕ ಪವಾಡಶೆಟ್ಟಿ, ತಾಲೂಕು ಅಧ್ಯಕ್ಷ ರಾಚನಗೌಡ ಗೌಡರ, ಕಾರ್ಯದರ್ಶಿ ದೇಸಾಯಿ, ಗುರುರಾಜ ಕುಲಕರ್ಣಿ, ಅರ್ಜುನ ಕೊಪ್ಪಳ, ಮಹೇಶ ಪಾಟೀಲ, ಪುರಸಭೆ ಸದಸ್ಯರಾದ ಬಸನಗೌಡ ಪಾಟೀಲ, ಬಸವರಾಜ ಬಸನಗೌಡ್ರ, ನಾಗರಾಜ ಪಲ್ಲೇದ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಸವಂತಪ್ಪ ತಳವಾರ, ಸುರೇಶ ನಾಯ್ಕರ, ಮಲ್ಲು ಮಾದರ, ಪಿ.ಸಿ.ಪೋಲಿಸ್ ಪಾಟೀಲ, ಶರಣಪ್ಪ ಕಂಬಳಿ, ಬಿ.ಎಸ್. ತೆಗ್ಗಿನಕೇರಿ, ಮೈಲಾರಪ್ಪ ದೇಶಣ್ಣವರ, ಮುದಿಯಪ್ಪ ಜೋಗಣ್ಣವರ, ಬಸವರಾಜ ಕೊಟಗಿ, ಹೂವಪ್ಪ ಮೂಲಿಮನಿ ಮುಂತಾದವರು ಉಪಸ್ಥಿತರಿದ್ದರು.
Advertisement