ಲಕ್ಷ್ಮೇಶ್ವರ: ಎಂಇಎಸ್ ಪುಂಡರ ಗುಂಡಾಗಿರಿ ಪ್ರವೃತ್ತಿ ನಿಲ್ಲಿಸಬೇಕು, ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವ ಭಂಡರಿಗೆ ರಾಜ್ಯ ಸರ್ಕಾರ ಸರಿಯಾದ ಉತ್ತರ ನೀಡಬೇಕು, ನಿದ್ರೆ ಮಾಡುತ್ತಿರುವ ರಾಜ್ಯ ಸರ್ಕಾರ ಶೀಘ್ರ ಎಚ್ಚೆತ್ತು ಎಂಇಎಸ್ಗೆ ತಕ್ಕ ಉತ್ತರ ನೀಡಬೇಕು ಎಂದು ಕರ್ನಾಟಕ ಜನಹಿತ ವೇದಿಕೆಯ ಸದಸ್ಯರು ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ಭಾನುವಾರ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಹಾವಳಿ ಹನುಮಪ್ಪನ ದೇವಸ್ಥಾನದಿಂದ ಮೆರವಣಿಗೆ ಹೊರಟ ಕಜವೇ ಕಾರ್ಯಕರ್ತರು ಹೊಸ ಬಸ್ ನಿಲ್ದಾಣಕ್ಕೆ ತೆರಳಿ ನಂತರ ಶಿಗ್ಲಿ ಕ್ರಾಸ್ಗೆ ಆಗಮಿಸಿ ರಸ್ತೆ ತಡೆ ನಡೆಸಿ ಟೈರ್ಗೆ ಬೆಂಕಿ ಹಚ್ಚಿ ಎಂಇಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲೋಕೇಶ ಸುತಾರ, ಬಸವರಾಜ ಹೊಗೆಸೊಪ್ಪಿನ, ಅಶೋಕ ಹಳ್ಳಿಕೇರಿ, ಸಂತೋಷ ಪೂಜಾರ, ಫಕ್ಕೀರೇಶ ಅಣ್ಣಿಗೇರಿ, ಗಂಗಾಧರ ಕರ್ಜಕಣ್ಣವರ, ಅರುಣ ಮೆಕ್ಕಿ, ಬಸವರಾಜ ಚಕ್ರಸಾಲಿ, ಸುನೀಲ ಮುಳಗುಂದ, ನವೀನ ಕುಂಬಾರ, ಖಂಡೋಬಾ ನವಲೆ, ಗಿರೀಶ ಚಕ್ರಸಾಲಿ, ರುದ್ರನಗೌಡ ಪಾಟೀಲ, ಸಂಜೀವ ಪೂಜಾರ, ಜಹೀರ ಮೊಮಿನ್, ರವಿ ಅಣಸಿ, ಶಂಭು ಬೆಳವಿಗಿ, ರವಿ ಚಕ್ರಸಾಲಿ ಮುಂತಾದವರು ಇದ್ದರು.
Advertisement