ಮುಂಡರಗಿ: ರೈತರ ಪಂಪ್ಸೆಟ್ಗಳಿಗೆ ನಿರಂತರವಾಗಿ 10 ಗಂಟೆ ಕಾಲ 3 ಫೇಸ್ ವಿದ್ಯುತ್ ನೀಡುವಂತೆ ಹಾಗೂ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸೋಮವಾರ ಪಟ್ಟಣದ ಹೆಸ್ಕಾಂ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ದೇವಪ್ಪ ಇಟಗಿ ಮಾತನಾಡಿ, ಟಿಸಿ ರಿಪೇರಿ ಕೇಂದ್ರ ಪ್ರಾರಂಭಿಸಿ ಸುಟ್ಟ 24 ಗಂಟೆಯಲ್ಲಿ ಮರಳಿ ನೀಡುವ ವ್ಯವಸ್ಥೆ ಆಗಬೇಕು. ನಿರಂತರ ಜ್ಯೋತಿ ಸರಿಯಾಗಿ ಸರಬರಾಜು ಆಗುತ್ತಿಲ್ಲ. ಇದಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ಎಂದು ದೂರಿದರು.
ಜಾಲವಾಡಗಿ ಗ್ರಾಮದ ರೈತ ವಿರೂಪಾಕ್ಷಪ್ಪ ಕೊಪ್ಪಳ ಮಾತನಾಡಿ, ತಾಲೂಕಿನಲ್ಲಿ ಪದೇ ಪದೇ ರೈತರ ಟಿಸಿಗಳು ಸುಡುತ್ತಿದ್ದು, ಇದಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಟಿಸಿಯಿಂದಾಗಿ ನನ್ನ 2 ಎಕರೆ ಬಾಳೆ ಬೆಳೆ ಸಂರ್ಪೂವಾಗಿ ನಾಶವಾಗಿದೆ. ರೈತರ ಕಷ್ಟ ಸರ್ಕಾರಕ್ಕೆ, ಅಧಿಕಾರಿಗಳಿಗೆ ಅರ್ಥವಾಗಲ್ಲ ಎಂದು ದೂರಿದರು.
ಮನವಿ ಸ್ವೀಕರಿಸಿ ಹೆಸ್ಕಾಂ ಅಧಿಕಾರಿ ಮಂಜುನಾಳ ಮಾತನಾಡಿ, ಇಲ್ಲಿನ ರೈತರ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದು, ಶೀಘ್ರದಲ್ಲಿಯೇ ಸುಟ್ಟ ಟಿಸಿಗಳನ್ನು ದುರಸ್ತಿಗೊಳಿಸಲು ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ಟಿಸಿ ರಿಪೇರಿ ಕೇಂದ್ರ ತಾಲೂಕಿನಲ್ಲಿ ಪ್ರಾರಂಭವಾಗಲಿದೆ. ಅಲ್ಲಿಯವರೆಗೆ ಸಹಕರಿಸಬೇಕು. ನಿರಂತರ ಜ್ಯೋತಿ ವಿದ್ಯುತ್ ಸಮಸ್ಯೆಗಳ ಕುರಿತು ತಾವು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕೆ.ವಿ. ಹಂಚಿನಾಳ, ದೇವಪ್ಪ ಕಬಳಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ರುದ್ರಪ್ಪ ಕೊರ್ಲಗಟ್ಟಿ, ಶ್ರೀನಿವಾಸ ಅಬ್ಬಿಗೇರಿ, ಬಿ.ಕೆ. ಪಾಟೀಲ, ಬಸವರಾಜ ಸಸಿಮಠ, ಬಸವರಾಜ ಬಿಳಿಮಗ್ಗದ, ಹಾಲಪ್ಪ ಉಂಡಂಡಿ, ಮಲ್ಲಿಕಾರ್ಜುನ ಬಹದ್ದೂರ ದೇಸಾಯಿ, ಚಂದ್ರಶೇಖರಯ್ಯ ಕಲ್ಮಠ, ರಾಜಶೇಖರಪ್ಪ ಹಾವೇರಿ, ಎ.ಐ. ಮಾರನಬಸರಿ, ಉಮೇಶ ಅಂಕದ, ಸಿದ್ದಪ್ಪ ನವಲಿ, ಪ್ರಭು ಅಬ್ಬಿಗೇರಿ, ಶಂಕರಗೌಡ ಪಾಟೀಲ, ಪರಶುರಾಮ ಕರಡಿಕೊಳ್ಳ, ಸುರೇಶ ಮಾಳೆಕೊಪ್ಪ, ಮೌನೇಶ ದೇಸಾಯಿ, ಶಾಂತಿನಾಥ ಬಸ್ತಿ, ಹುಚ್ಚಪ್ಪ ತಳವಾರ, ಬಸವರಾಜಪ್ಪ ಮೇಟಿ, ರಮೇಶ ಹುಳಕಣ್ಣವರ, ಶಿವನಗೌಡ ಗೌಡರ, ಎಂ.ಎಸ್. ಪಾಟೀಲ, ಜೆ.ಎಸ್. ಚೆಂಡಿ ಸೇರಿದಂತೆ ನೂರಾರು ರೈತರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Advertisement