ನರಗುಂದ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರೈತರಿಗೆ ಉಚಿತವಾಗಿ ನಿರಂತರ 8 ಗಂಟೆ 3 ಪೇಸ್ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ಈಗ ಕೇವಲ 3 ತಾಸು ತ್ರಿಪೇಸ್ ವಿದ್ಯುತ್ ನೀಡುತ್ತಿರುವ ಕ್ರಮ ಖಂಡಿಸಿ ಸೋಮವಾರ ನರಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ವಿದ್ಯುತ್ ಕಡಿತ ವಿರೋಧಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪುರಸಭೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ವೈ. ದಂಡಿನ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಎಲ್ಲ ರೈತರಿಗೆ 8 ಗಂಟೆಗಳ ಕಾಲ ನಿರಂತರ 3 ಪೇಸ್ ವಿದ್ಯುತ್ ನೀಡುತ್ತೇವೆಂದು ಹೇಳಿ ಈಗ ದಿನಕ್ಕೆ 2-3 ತಾಸು ತ್ರೀಫೇಸ್ ವಿದ್ಯುತ್ ನೀಡುತ್ತಿದೆ ಎಂದರು.
ಪುರಸಭೆ ಸದಸ್ಯ ವಾಸು ಜೋಗಣ್ಣವರ, ರಾಜುಗೌಡ ಪಾಟೀಲ, ತಾಲೂಕಿನ ಬೆಣ್ಣಿಹಳ್ಳ ಮತ್ತು ಮಲಪ್ರಭಾ ಪಕ್ಕದಲ್ಲಿರುವ ರೈತರ ಜಮೀನುಗಳ ಬೆಳೆಗೆ ನೀರು ಹಾಯಿಸಲು ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ. ಹೆಸ್ಕಾಂ ಅಧಿಕಾರಿಗಳು ರಾತ್ರಿ ತ್ರೀಪೇಸ್ ವಿದ್ಯುತ್ ನೀಡಿ ಕೈ ತೊಳೆದುಕೊಳ್ಳುವರು. ಸರ್ಕಾರ ದಿನಕ್ಕೆ 10 ಗಂಟೆ ಕಾಲ ತ್ರಿ ಪೇಸ್ ವಿದ್ಯುತ್ ನೀಡಬೇಕು ಎಂದರು.
ಅಂದಾನಗೌಡ ಪಾಟೀಲ, ಎಂ.ಎಸ್. ಪಾಟೀಲ, ಎಸ್.ಬಿ. ಕರಿಗೌಡರ, ಕಿರಣ ಮುಧೋಳೆ, ಶಿವಾನಂದ ಮುತ್ತವಾಡ, ಪ್ರಕಾಶ ಪಟ್ಟಣಶಟ್ಟಿ, ಗುರಪ್ಪ ಆದಪ್ಪನವರ, ಬಿ.ಎಸ್. ಪಾಟೀಲ, ಎಲ್.ಎಂ. ಪಾಟೀಲ, ಅಜ್ಜು ಪಾಟೀಲ, ವಿರೂಪಾಕ್ಷಪ್ಪ ನರಸಾಪುರ, ಸುಪುತ್ರಪ್ಪ ಐನಾಪುರ, ಸಂಗಪ್ಪ ಪೂಜಾರ, ನಾಗನಗೌಡ ತಿಮ್ಮನಗೌಡ್ರ, ಹನಮಂತ ಜಾರಗಟ್ಟಿ, ನಾಗರಾಜ ಚಿತ್ರಗಾರ, ಮಹೇಶ್ವರಯ್ಯ ಸುರೇಬಾನ, ಮಂಜು ಮೆಣಸಗಿ, ವಿ.ಬಿ. ಕರಿಬಸಣ್ಣವರ, ಸಂಗಪ್ಪ ಪೂಜಾರ, ಶಿವಾನಂದ ತೆಗ್ಗಿನಮನಿ, ಮುರಿಯಪ್ಪ ಗಾಣಿಗೇರ, ಅಶೋಕ ಪತ್ರಿ, ವಿ.ಎಸ್. ಸುಂಕದ ಇತರರಿದ್ದರು.
Advertisement