ಗದಗ: ತಾಲೂಕಿನ ನಾಗಾವಿ ತಾಂಡಾದ ನಾಗದೇವತೆಯ 14ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಧರ್ಮ ಚಿಂತನ ಗೋಷ್ಠಿ, 101 ಮುತ್ತೈದೆಯರಿಗೆ ಉಡಿ ತುಂಬುವ, ಸನ್ಮಾನ ಮತ್ತು ರಸಮಂಜರಿ ಕಾರ್ಯಕ್ರಮ ಆ. 10 ಮತ್ತು 11ರಂದು ಜರುಗಲಿವೆ. ಆ. 10ರಂದು ರಾತ್ರಿ 8ಕ್ಕೆ ನಾಗಾವಿ, ಕಳಸಾಪುರ, ಶಿರೋಳ ತಾಂಡಾಗಳ ಮತ್ತು ಬಿಜಾಪುರ ಬಂಜಾರ ಗಾಯಕರಿಂದ ಹಾಗೂ ಸಾವಿತ್ರಿ ಲಮಾಣಿ ಅವರಿಂದ ಭಜನಾ ಕಾರ್ಯಕ್ರಮದೊಂದಿಗೆ ಜಾಗರಣೆ ನಡೆಯಲಿದೆ. ಆ. 11ರಂದು ಬೆಳಗ್ಗೆ 8ರಿಂದ 10ರ ವರೆಗೆ ದೇವಿಗೆ ರುದ್ರಾಭಿಷೇಕ, ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಧರ್ಮ ಚಿಂತನಗೋಷ್ಠಿ ಜರುಗಲಿದ್ದು, ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಜ. ಅಭಿನವ ಬೂದೀಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಮಲ್ಲಸಮುದ್ರಗಿರಿಯ ಶಿವರೇಣುಕ ಬಸವ ದೇಶಿಕರು ನೇತೃತ್ವ ವಹಿಸುವರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಸಮ್ಮುಖ ವಹಿಸುವರು. ಅನಿಲ ಮೆಣಸಿನಕಾಯಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ನಾಗಾವಿ ತಾಂಡಾದ ನಾಗದೇವತೆ ವಿವಿಧೋದ್ದೇಶ ಸೇವಾ ಟ್ರಸ್ಟಿನ ಕೃಷ್ಣ ರಾಠೋಡ ವಹಿಸುವರು. ಇದೇ ಸಂದರ್ಭದಲ್ಲಿ ವಿಕಾಸ ಲಮಾಣಿ, ಪಾಂಡುರಂಗ ಪಮ್ಮಾರ, ಬಸವಣ್ಣೆಯ್ಯ ಹಿರೇಮಠ, ನಾರಾಯಣ ರಾಠೋಡ, ನಾಮದೇವ ನಾಯ್ಕ, ಲಕ್ಷ್ಮಣ ರಾಠೋಡ, ಕೃಷ್ಣ ಲಮಾಣಿ ಅವರನ್ನು ಸನ್ಮಾನಿಸಲಾಗುವುದು. ಅತಿಥಿಗಳಾಗಿ ಶಂಭುಲಿಂಗಯ್ಯ ಕಲ್ಮಠ, ಎಂ.ಬಿ. ಗೊರವನಕೊಳ್ಳ, ಭೀಮಸಿಂಗ್ ರಾಠೋಡಿ, ಅಂದಾನಯ್ಯ ಹಿರೇಮಠ, ನಾಮದೇವ ಮಹಾರಾಜ, ವಿಜಯಕುಮಾರ ಗಡ್ಡಿ, ಶಾರದಾ ತೋಟದ, ದಯಾನಂದ ಪವಾರ, ಸೋಮನಾಥ ರಾಠೋಡ, ವೆಂಕಟೇಶ ದಾಸರ, ಲಕ್ಷ್ಮಣ ಗುಡಿಮನಿ, ಶಿವಪ್ಪ ನಾಯಕ, ರಾಮಣ್ಣ ರಾಠೋಡ, ಸತೀಶ ಮುದಗಲ್ಲ, ಹಟಿಯಪ್ಪ ರಾಠೋಡ, ವಿ.ಜಿ. ಪವಾರ, ಪಾಂಡಪ್ಪ ಗಿರಿ, ಧರ್ಮಪ್ಪ ರಾಠೋಡ, ಗೋಪಾಲ ರಾಠೋಡ, ಗಣೇಶ ರಾಠೋಡ, ಪಾಂಡಪ್ಪ ಲಮಾಣಿ, ಶಂಕರ ಚವ್ಹಾಣ, ಪರಶುರಾಮ ನಾಯ್ಕ್, ಹನುಮಂತಪ್ಪ ದೊಡ್ಡಮನಿ, ತರಿಯಪ್ಪ ಪೂಜಾರ, ದೇವಪ್ಪ ಗುಡಿಮನಿ ಆಗಮಿಸುವರು. ನಂತರ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಸಂಜೆ 7 ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಸಂಘಟಕ ಶಿವಲಿಂಗಶಾಸ್ತ್ರಿ ಸಿದ್ದಾಪುರ ತಿಳಿಸಿದ್ದಾರೆ.
ನಿವೃತ್ತ ಪೌರಸೇವಾ ನೌಕರ ವಾರ್ಷಿಕ ಸಭೆ 9ರಂದು
ಗದಗ: ಜಿಲ್ಲಾ ನಿವೃತ್ತ ಪೌರಸೇವಾ ನೌಕರರ ವಾರ್ಷಿಕ ಸಾಮಾನ್ಯ ಸಭೆಯು ಆ. 9ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಸ್ಥಳೀಯ ಬಸವೇಶ್ವರ ನಗರದ (ಕರ್ನಾಟಕ ಚಿತ್ರಮಂದಿರದ ಹಿಂದೆ) ಗದಗ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಲಿದೆ. ಸಭೆಯಲ್ಲಿ 2013-14ನೇ ಸಾಲಿನ ವಾರ್ಷಿಕ ವರದಿ, ಜಮಾ ಖರ್ಚು ಮತ್ತು ಲೆಕ್ಕತಪಾಸಣಾ ವರದಿಗೆ ಅನುಮೋದನೆ ಪಡೆಯಲಾಗುವುದು ಮತ್ತು 2014-15ನೇ ಸಾಲಿನ ಸಂಘದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಹಾಗೂ ನಿರ್ದೇಶಕರ ಆಯ್ಕೆ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎನ್. ಸಿಂಗಾಡಿ ವಹಿಸುವರು ಎಂದು ಎಂ.ವಿ. ಹೂಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನದಿ ತೀರದಲ್ಲಿ ಮುನ್ನೆಚ್ಚರಿಕೆ
ಗದಗ: ಭದ್ರಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದೆ. ಆ. 1ರಂದು ಜಲಾಶಯದ ನೀರಿನ ಮಟ್ಟ 178.6 ಅಡಿಗೆ ತಲುಪಿರುತ್ತದೆ. ಹರಿದು ಬರುವ ಒಳಹರಿವಿನ ಪ್ರಮಾಣ ಇಂದು 78 ಸಾವಿರ ಕ್ಯುಸೆಕ್ ಇದ್ದು, ಇದೇ ರೀತಿ ಮುಂದುವರಿದಲ್ಲಿ ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿಗೆ ಅತೀ ಶೀಘ್ರವಾಗಿ ತಲುಪುವ ನಿರೀಕ್ಷೆಯಿದೆ. ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡಲಾಗುವುದು. ಕಾರಣ ಭದ್ರಾ ನದಿ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಿ ಈ ಮೂಲಕ ಕೋರಲಾಗಿದೆ.
Advertisement