ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಜು. 16ರಂದು ಗದಗ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ನೇತೃತ್ವದಲ್ಲಿ ಬಾಲಕಾರ್ಮಿಕನನ್ನು ಹಠಾತ್ ತಪಾಸಣೆ ನಡೆಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಹುಗ್ಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ. ಖಟವಟಿ, ಕಾರ್ಮಿಕ ನಿರೀಕ್ಷಕ ಸಂಗೀತಾ ಬೆನಕೊಪ್ಪ, ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ ಹಾಗೂ ಸಿದ್ಧನಗೌಡ ಪಾಟೀಲ, ಯೋಜನಾ ನಿರ್ದೇಶಕ ಗವಿಸಿದ್ಧಪ್ಪ ಜಿ. ಅವರು ದಾಳಿಯಲ್ಲಿ ಪಾಲ್ಗೊಂಡು, ಸಚಿನ್ ಚನ್ನಪ್ಪ ಬಾಗೂರು ಹಾಗೂ ಹನುಮಂತಪ್ಪ ಮಹಾದೇವಪ್ಪ ಭೋಸ್ಲೆ ಮತ್ತು ಶೆಟ್ಟಪ್ಪ ನಾಗಪ್ಪ ಗಡೆಕಾರ್ ಅವರನ್ನು ಕೆಲಸ ಮಾಡುವ ಸಂದರ್ಭ ಪತ್ತೆ ಹಚ್ಚಿ ಶಾಲೆಗೆ ಸೇರಿಸಲಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.