ನಾಳೆ ರೋಟರಿ ಪದಗ್ರಹಣ

Updated on: 

ನರೇಗಲ್ಲ: ಜು. 20ರಂದು ಸ್ಥಳಿಯ ಅನ್ನದಾನೀಶ್ವರ ಕಾಲೇಜಿನ ಆಡಿಟೋರಿಯಂ ಹಾಲ್‌ನಲ್ಲಿ ಸಂಜೆ 4.30ಕ್ಕೆ ರೋಟರಿ ಕ್ಲಬ್‌ನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಕೃಷ್ಣಾ ಕಾಳೆ ತಿಳಿಸಿದರು. ಶುಕ್ರವಾರ ಸ್ಥಳಿಯ ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆವರಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಅವಿನಾಶ ಪೋತದಾರ, ಜ್ಯೋತಿ ಶ್ರೀ ಕಾಮತ್, ರೂಪಾಪೋತದಾರ, ದೈಹಿಕ ಶಿಕ್ಷಕ ಬಿ.ವಿ. ಗೌಡರ ಆಗಮಿಸುವರು. ಅಧ್ಯಕ್ಷ ಶಿವನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. 2014-1ನೇ ಸಾಲಿನ ಕಾರ್ಯಕಾರಿ ಮಂಡಳಿ ರಚಿಸಿದ್ದು, ಅಧ್ಯಕ್ಷರಾಗಿ ಡಾ. ಕೃಷ್ಣಾ ಕಾಳೆ, ಉಪಾಧ್ಯಕ್ಷರಾಗಿ ಬಿ.ಡಿ. ಕರಡಣ್ಣವರ, ಕಾರ್ಯದರ್ಶಿಯಾಗಿ ಗೋಪಾಲ ಭಡಂಕರ, ಖಜಾಂಚಿಯಾಗಿ ನಿಂಗರಾಜ ಬೇವಿನಕಟ್ಟಿ ಆಯ್ಕೆಗೊಂಡಿದ್ದು, ಜು 20ರಂದು ಪದಗ್ರಹಣ ಸ್ವೀಕರಿಸಲಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com