ಗದಗ: ಇಂದು ನೀರು ಪೂರೈಕೆ

Updated on: 

ಗದಗ: ಮಸಾರಿ ಉಳಿದ ಭಾಗ, ಗಣಪತಿ ಗುಡಿ ಲೈನ್, ವಿವೇಕಾನಂದ ರೋಡ್, ನವಲೆ ಲೈನ್, ಕೊಳಚೆ ಪ್ರದೇಶ, ಕಿರೇಸೂರ ಲೈನ್, ಬ್ಯಾಳಿ ಅವರ ಲೈನ್, ಶಿವನಗುತ್ತಿ ಲೈನ್, ಕುಷ್ಟಗಿ ಅವರ ಲೈನ್, ವಕೀಲ ಚಾಳ, ಗೋಮ್ಸ್ ಬಿಲ್ಡಿಂಗ್, ದಿಲ್ಲಿ ರೆಡಿಮೇಡ್ ಶಾಲೆ, ಜಾಲಿಹಾಳ ಡಾಕ್ಟರ್ ಲೈನ್, ನೂರಾನಿ ಲೈನ್, ಹಣಗಿ ಜೀನ್ 2 ಭಾಗ, ಸೊಲಾಪಟ್ಟಿ ಅವರ ಲೈನ್, ಕೃಷ್ಣಾ ಟುಟೋರಿಯಲ್ ಲೈನ್ ಈ ಭಾಗಗಳಲ್ಲಿ ಭಾನುವಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ
ತಿಳಿಸಿದೆ.




ನಗದು ಬಹುಮಾನ: ಅರ್ಜಿ
ಗದಗ:  ರಾಜ್ಯ ಸರ್ಕಾರವು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವಂತಹ ಇಬ್ಬರು ವ್ಯಕ್ತಿಗಳಿಗೆ ತಲಾ ರು. 25 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ 2 ಸಂಸ್ಥೆಗಳಿಗೆ ತಲಾ ರು. 1 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಮಕ್ಕಳ ದಿನಾಚರಣೆಯೆಂದು ಪ್ರದಾನ ಮಾಡಿ ಗೌರವಿಸುತ್ತದೆ. 2014ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದ್ವಿ ಪ್ರತಿಯಲ್ಲಿ ಸಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಗೆ ಆಗಸ್ಟ್ 16ರೊಳಗೆ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಚಮಸಾಲಿ ಸಭೆ ಇಂದು
ಗಜೇಂದ್ರಗಡ: ಸ್ಥಳೀಯ ವೀರಶೈವ ಪಂಚಮಸಾಲಿ ಜಾಗೃತಿ ಸಂಘದ ಸಾಮಾನ್ಯ ಸಭೆ ಜು. 20ರಂದು ಬೆಳಗ್ಗೆ 10ಕ್ಕೆ ಪಟ್ಟಣದ ಮೈಸೂರು ಮಠದಲ್ಲಿ ನಡೆಯಲಿದೆ. ಟಿ.ಎಸ್. ರಾಜೂರ ಅಧ್ಯಕ್ಷತೆ ವಹಿಸುವರು. ಪ್ರಭು ಚವಡಿ, ಅಮರೇಶಪ್ಪ ಬೂದಿಹಾಳ, ಮುತ್ತಣ್ಣ ಮ್ಯಾಗೇರಿ, ಶಂಕರಗೌಡ ಬೆಳವಣಿಕಿ, ಗುಂಡಪ್ಪ ಪಲ್ಲೇದ, ಕಳಕಪ್ಪ ಸಂಗನಾಳ ಬಸಪ್ಪ, ಬನ್ನಿಗೋಳ ಹಾಗೂ ಗಜೇಂದ್ರಗಡ-ಉಣಚಗೇರಿ ಸಮಾಜದ ಬಾಂಧವರು ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವ
ನರಗುಂದ:  ಪಟ್ಟಣದ ರಾಚಯ್ಯ ನಗರದ ಗುರು ನಾಗರಹಳ್ಳಿ ಶರಣಬಸೇವೇಶ್ವರ ದಾಸೋಹ ಮಠದ ಜಾತ್ರಾ ಮಹೋತ್ಸವ ಆ. 2ರಂದು ಜರುಗಲಿದ್ದು, ತನ್ನಿಮಿತ್ತ
ಸಾಮೂಹಿಕ ವಿವಾಹಗಳು ನಡೆಯಲಿದೆ. ವಿವಾಹಕ್ಕೆ ಹೆಸರು ನೋಂದಾಯಿಸಲು ಇಚ್ಛಿಸುವವರು 9743394907, 9986677252, ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com