ನರಗುಂದ: ಸಾಮೂಹಿಕವಾಗಿ ಪುರಸಭೆಯ ಮುಖ್ಯಾಧಿಕಾರಿ ಸೇರಿ 5 ಸಿಬ್ಬಂದಿಯನ್ನು ಶಾಸಕರು ರಾಜಕೀಯ ದುರುದ್ದೇಶದಿಂದ ಸಾಮೂಹಿಕವಾಗಿ ವರ್ಗಾವಣೆ ಮಾಡಿದ್ದಾರೆಂದು ಹೇಳಿರುವ ಬಿಜೆಪಿ ಸದಸ್ಯರ ಆರೋಪದಲ್ಲಿ ಯಾವುದೇ ಹುರಳಿಲ್ಲವೆಂದು ಕಾಂಗ್ರೆಸ್ ಸದಸ್ಯ ಎಸ್.ಆರ್. ಪಾಟೀಲ ಹೇಳಿದರು.
ಅವರು ಪಟ್ಟಣದ ಆಯಿಲ್ ಮಿಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ನೌಕರರ ಸೇವಾ ನಿಯಮವಳಿ ಪ್ರಕಾರ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಾವಣೆ ಆಗಿದೆ. ಈ ವರ್ಗಾವಣೆಯನ್ನು ಶಾಸಕರು ಮಾಡಿಸಿದ್ದಾರೆಂದು ಬಿಜೆಪಿ ಸದಸ್ಯರು ಪಟ್ಟಣದ ಜನತೆಗೆ ತಪ್ಪು ಸಂದೇಶ ನೀಡಲು ಹೊರಟಿದ್ದು ಖಂಡನೀಯ ಎಂದರು