ಗದಗ: ಸ್ಥಳೀಯ ಬಸವೇಶ್ವರ ನಗರದ ಶಂಕರಲಿಂಗ ದೇವಸ್ಥಾನದಲ್ಲಿ ಈಚೆಗೆ ದಾನಮ್ಮದೇವಿ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘ ಹುಣಶೀಮರದ ಹಿರಿಯ ಸೇವಾ ಟ್ರಸ್ಟ್, ಸ್ವಯಂ ಉದ್ಯೋಗ ತರಬೇತಿ ಘಟಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶ್ರೀ ರಾಮ್ ಸೇವಾ ಟ್ರಸ್ಟ್ ಮತ್ತು ಗದಗ-ಬೆಟಗೇರಿ ನಗರಸಭೆ ಸಂಯುಕ್ತಾಶ್ರಯದಲ್ಲಿ ದೇವದಾಸಿಯರಿಗೆ ಸಾಲ ವಿತರಣೆ, ವಿಕಲಚೇತನ ಮಹಿಳೆಯರಿಗೆ ತ್ರಿಚಕ್ರದ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು. ಅಪರ ಜಿಲ್ಲಾಧಿಕಾರಿ ನಾಗರಾಜ ಮಾತನಾಡಿದರು. ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ, ವಿಕಲಚೇತನ ಮಹಿಳೆಯರಿಗೆ ತ್ರಿಚಕ್ರ ಸೈಕಲ್ ವಿತರಣೆ ಮಾಡಿದ ನಗರಸಭೆ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರೇಣುಕ ಬಸವ ದೇಶಿಕರು ಸಾನ್ನಿಧ್ಯ ವಹಿಸಿದ್ದರು.