ಜಾಗೃತಿ ಕಾರ್ಯಕ್ರಮ

Updated on: 

ಗದಗ: ಗದಗ ಜಿಲ್ಲಾ ಪೊಲೀಸ್ ಮತ್ತು ಬೆಟಗೇರಿ ಪೊಲೀಸ್ ಠಾಣೆಯಿಂದ ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಜರುಗುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಗದಗ-ಬೆಟಗೇರಿಯಲ್ಲಿ ಜಾಗೃತಿ ಮೂಡಿಸಲಾಯಿತು. ಬೆಟಗೇರಿ ಬಾಸೆಲ್ ಮಿಶನ್ ಕೃಷಿ ಪ್ರೌಢಶಾಲೆ, ಬೆಟಗೇರಿ ಸಿಪಿಐ ಜೆ.ಆರ್. ನಿಕ್ಕಂ ಮತ್ತು ಬೆಟಗೇರಿ ಠಾಣೆ ಪಿಎಸ್‌ಐ ಎಂ.ಬಿ. ಗೊರವನಕೊಳ್ಳ ಮತ್ತು ಸಿಬ್ಬಂದಿ, ಎಎಸ್‌ಐ ಕೆ.ಜಿ. ಲಮಾಣಿ, ಬಿ.ಬಿ. ಕರಮುಡಿ, ಎನ್.ಜಿ. ಭರಮಗೌಡ್ರ, ರವಿ ರಾಠೋಡ, ಚಳ್ಳಿಗೇರಿ, ಜವಳಿ, ಬೂದಿಹಾಳ, ಬೂದಿನ್, ಹಾಗೂ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.


ಶನಿವಾರ ಸಾಹಿತ್ಯ ಸಂಜೆ 80ನೇ ಮಾಲಿಕೆ


ಗದಗ:  ಸುಧಾಮೂರ್ತಿ ಉದ್ಯಮಿಯಾಗಿ, ಲೇಖಕರಾಗಿ ಮತ್ತು ಕೌಟುಂಬಿಕ ಜೀವನದಲ್ಲೂ ಯಶಸ್ಸನ್ನು ಪಡೆದ ಪರಿಪೂರ್ಣ ಮಹಿಳೆಯಾಗಿದ್ದಾರೆ. ಅವರ ಜೀವನದ ಸಾಧನೆಯೇ ಇತರ ಮಹಿಳೆಯರಿಗೆ ಮಾರ್ಗದರ್ಶನವಾಗುತ್ತದೆ ಎಂದು ಹುಬ್ಬಳ್ಳಿಯ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಜಯಶ್ರೀ ಅಂಗಡಿ ಹೇಳಿದರು. ಅವರು ತಾಪಂ ಆವರಣದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆಯ 80ನೇ ಮಾಲಿಕೆ ಕಾರ್ಯಕ್ರಮದಲ್ಲಿ ಡಾ. ಸುಧಾಮೂರ್ತಿ ಅವರ ಬದುಕು ಬರಹ ವಿಷಯ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ರೇಖಾ ಟಿಕಾರೆ ಸ್ವರಚಿತ ಕವನ ವಾಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com