ಗದಗ: ನಗರದ ಮಸಾರಿ ಭಾಗದಲ್ಲಿರುವ ಜ. ವಿಶ್ವಾರಾಧ್ಯ ಮಂದಿರ ಆವರಣದಲ್ಲಿರುವ ಜ. ವಿಶ್ವಾರಾಧ್ಯರ ಲಿಂಗೋದ್ಭವ ಮೂರ್ತಿಗೆ ಶ್ರಾವಣಮಾಸದ ನಿಮಿತ್ತ ಜು. 27ರಿಂದ ಆ. 25ರ ವರೆಗೆ ಮಹಾರುದ್ರಾಭಿಷೇಕ ಹಾಗೂ ನಾಮಾವಳಿ ಕಾರ್ಯಕ್ರಮ ಪ್ರತಿನಿತ್ಯ ಬೆಳಗ್ಗೆ 6ರಿಂದ 8.30ರ ವರೆಗೆ ನೆರವೇರುವುದು. ಕಾರಣ ಸದ್ಭಕ್ತರು ಪಾಲ್ಗೊಳ್ಳುವಂತೆ ಶ್ರೀಮಠದ ಕಾರ್ಯದರ್ಶಿ ಶರಣಬಸಯ್ಯ ಜುಕ್ತಿಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರುದ್ರಾಭಿಷೇಕ: ಬೆಟಗೇರಿ ಹುಯಿಲಗೋಳ ರಸ್ತೆಯ ಗೌರಿಗುಡಿ ಓಣಿಯ ಗೌರಿಶಂಕರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಜು. 27ರಿಂದ ಆ. 24ರ ವರೆಗೆ ರುದ್ರಾಭಿಷೇಕ ಜರುಗಲಿದೆ. ಪ್ರತಿನಿತ್ಯ ಬೆಳಗ್ಗೆ 6.30 ರಿಂದ 8.30 ರ ವರೆಗೆ ಗೌರಿಶಂಕರ ದೇವರಿಗೆ ಶರಣಯ್ಯಶಾಸ್ತ್ರಿಗಳು ಶಿವಪ್ಪಯ್ಯನಮಠ ಅವರ ವೈದಿಕತ್ವದಲ್ಲಿ ರುದ್ರಾಭಿಷೇಕ, ಪೂಜೆ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನದ ಚೇರ್ಮನ್ ಬಸವಂತಪ್ಪ ಮಾರನಬಸರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.