ಮಹಾರಾಷ್ಟ್ರ ಬ್ಯಾಂಕ್ ಬಂದ್

Updated on: 

ಕನ್ನಡಪ್ರಭ ವಾರ್ತೆ, ಗದಗ, ಜು. 28
ಎಂಇಎಸ್ ಪುಂಡಾಟಿಕೆ ಹಿನ್ನೆಲೆಯಲ್ಲಿ ಶಾಸಕ ಸಂಭಾಜಿ ಪಾಟೀಲ ಅವರನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ಜನಹಿತ ವೇದಿಕೆ ಕಾರ್ಯಕರ್ತರು ನಗರದ ಮಹಾರಾಷ್ಟ್ರ ಬ್ಯಾಂಕ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜನಹಿತ ವೇದಿಕೆಯ ಜಿಲ್ಲಾಧ್ಯಕ್ಷ ವೈ.ಎಚ್. ನದಾಫ ಮಾತನಾಡಿ, ಬೆಳಗಾವಿ ಜಿಲ್ಲೆಯ ಯಳ್ಳೂರಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತ ಅನ್ಯ ಭಾಷಾ ನಾಮಫಲಕಗಳನ್ನು ತೆರವುಗೊಳಿಸಿದ್ದನ್ನು ನೆಪವಾಗಿಟ್ಟುಕೊಂಡು ಎಂಇಎಸ್ ಕಾರ್ಯಕರ್ತರು ರಾಜ್ಯದ ಬಸ್‌ಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲದೇ ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಮಧ್ಯೆ ಜಗಳ ಹಚ್ಚಲು ಮುಂದಾದ ಶಾಸಕ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು.
ಗೋವಾ ಕನ್ನಡಿಗರ ಅನ್ಯಾಯ, ಬಾಲಕಿಯರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ದಿನದಿನಕ್ಕೆ ಹೆಚ್ಚುತ್ತಾ ಇವೆ. ಇಂತಹ ಘಟನೆ ಮರಕಳಿಸದಂತೆ ಸರ್ಕಾರ ಎಚ್ಚರವಹಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಆನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ರಮೇಶ ಅಬ್ಬಿಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಞಾನೇಶ, ಜಿಲ್ಲಾ ಸಂಚಾಲಕ ಮಾರುತಿ ಈಳಿಗೇರ, ಜಿಲ್ಲಾ ವಕ್ತಾರ ನಾಗೇಶ ಅಂಗಡಿ, ಸಿದ್ದು ಅಂದಾನಗೌಡ್ರ, ಸುರೇಶ ರಾಮಣ್ಣವರ, ತಾಲೂಕು ಅಧ್ಯಕ್ಷ ಮರಿಯಪ್ಪ ವಡ್ಡರ, ಹಾಲಪ್ಪ ಅರಹುಣಸಿ, ಅಶೋಕ ಹಾದಿಮನಿ, ಮಹೇಶ ಮಡಿವಾಳರ, ಪರಶುರಾಮ ಭಜಂತ್ರಿ, ಸಿಕಂದರ ಮುಲ್ಲಾ, ಹುಚ್ಚಪ್ಪ ಭಜಂತ್ರಿ, ಸಾಹಿಲ್ ನವಲಗುಂದ, ರಾಜು ಭಾಂಡಗೆ, ಅನಿಲ ರಾಯನಗೌಡ್ರ, ರಾಕೇಶ ಹಬೀಬ, ಶಿದ್ಲಿಂಗಪ್ಪ ವಡವಿ, ಗೌಸುಸಾಬ ನದಾಫ, ಮಲ್ಲೇಶ ಚವಡಿ, ಇಲಿಯಾಸ ನವಲಗುಂದ, ದತ್ತು ಬಾಕಳೆ, ಸೋಮಪ್ಪ ಮೇಲ್ಮನಿ, ರಾಮಪ್ಪ ಕಿರಿಕರಿ, ಪರಶುರಾಮ ಪೂಜಾರ, ಬಾಬು ನಾಯ್ಕರ ಪಾಲ್ಗೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com