ಗದಗ: ವಿಶ್ವಗುರು, ಮಹಾಮಾನವತಾವಾದಿ ಜಗಜ್ಯೋತಿ ಬಸವಣ್ಣನವರ ಲಿಂ. ಸ್ಮರಣೀಯ ಅಂಗವಾಗಿ ಬಸವ ಭಕ್ತರು, ಬಸವಾಭಿಮಾನಿಗಳು ಬಸವ ಪಂಚಮಿಯನ್ನಾಗಿ ಆಚರಿಸುತ್ತಾ ಬಂದಿದ್ದು, ಲಿಂಗಾಯತ ಪ್ರಗತಿಶೀಲ ಸಂಘ, ಜ. ತೋಂಟದಾರ್ಯ ಜಾತ್ರಾ ಸಮಿತಿ-2014, ಬಸವದಳ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು ಇವುಗಳ ಆಶ್ರಯದಲ್ಲಿ ಬಸವ ಪಂಚಮಿ-ಹಾಲುಣಿಸುವ ಹಬ್ಬವನ್ನು ಆ. 1ರ ಬೆಳಗ್ಗೆ 8.30ಕ್ಕೆ ನಗರದ ಜಿಲ್ಲಾ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಗೆ ತೆರಳಿ ಬಡರೋಗಿಗಳಿಗೆ ಹಾಲು ಬಿಸ್ಕಿಟ್ ವಿತರಿಸುವ ಮೂಲಕ ಆಚರಿಸಲಾಗುವುದು. ಕಾರಣ ನಗರದ ಸಾರ್ವಜನಿಕರು ಈ ವೈಚಾರಿಕ ಬಸವ ಪಂಚಮಿ ಹಬ್ಬ ಆಚರಿಸಲು ಆ. 1ರಂದು ಬೆಳಗ್ಗೆ 8ಕ್ಕೆ ಶ್ರೀಮಠಕ್ಕೆ ಆಗಮಿಸಲು ಲಿಂಗಾಯತ ಪ್ರಗತಶೀಲ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.